ಧಾರವಾಡ –
ವೇಗವಾಗಿ ಹೊರಟಿದ್ದ ಇನ್ನೊವ್ಹಾ ಕಾರಿಗೆ ಸಾರಿಗೆ ಬಸ್ ವೊಂದು ಹಿಂದಿನಿಂದ ಡಿಕ್ಕಿಯಾದ ಘಟನೆ ಧಾರವಾಡದಲ್ಲಿ ನಡೆದಿದೆ .ಧಾರವಾಡದ ಕೃಷಿ ಮಹಾವಿದ್ಯಾಲಯದ ಬಳಿ ಈ ಒಂದು ಅಪಘಾತವಾಗಿದೆ.

ಧಾರವಾಡದಿಂದ ಬೆಳಗಾವಿ ಕಡೆಗೆ KSRTC ಬಸ್ ಹೊರಟಿತ್ತು ಬಸ್ ಮುಂದೆ ಇನ್ನೊವ್ಹಾ ಕ್ರೇಸ್ಟಾ ಹೊಸ ಕಾರು ಹೊರಟಿತ್ತು ಕಾರು ಚಾಲಕ ಏಕಾಏಕಿಯಾಗಿ ಬ್ರೇಕ್ ಹಾಕಿದರಂತೆ ಹೀಗಾಗಿ ನಿಯಂತ್ರಣ ಸಿಗದ ಬಸ್ ಬ್ರೇಕ್ ಹತ್ತಲಿಲ್ಲವಂತೆ ಇದರಿಂದಾಗಿ ಕಾರಿಗೆ ಗುದ್ದಿದೆ.

ಇನ್ನೂ ಬೆಳ್ಳಂ ಬೆಳಿಗ್ಗೆ ದೊಡ್ಡ ಪ್ರಮಾಣದ ಅವಘಡವೊಂದು ನಗರದಲ್ಲಿ ತಪ್ಪಿದಂತಾಗಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಇನ್ನೂ ವಿಷಯ ತಿಳಿದ ಧಾರವಾಡ ಸಂಚಾರಿ ಪೊಲೀಸ್ ಠಾಣೆ ASI S B ಶಿಂಧೆ ಮತ್ತು ಸಿಬ್ಬಂದಿ ಯವರಾದ M M ಹೊಸಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.