ಹುಬ್ಬಳ್ಳಿಯಲ್ಲಿ ಮುಖ್ಯ ಶಿಕ್ಷಕ ಸೇರಿ ಮೂವರ ಮೇಲೆ ದೂರು ದಾಖಲು

Suddi Sante Desk

ಹುಬ್ಬಳ್ಳಿ –

ಹುಬ್ಬಳ್ಳಿಯಲ್ಲಿ ಶಿಕ್ಷಕರಿಗೆ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.ಹೌದು ನಗರದ ಉರ್ದು ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆ ಕಾಯಂ ಮಾಡಿಸಿಕೊಡುವುದಾಗಿ ಹೇಳಿ, ₹3 ಲಕ್ಷ ನಗದು ಹಾಗೂ ₹3 ಲಕ್ಷ ಮೌಲ್ಯದ ಚೆಕ್‌ ಪಡೆದು ಶಿಕ್ಷಕರೊಬ್ಬರಿಗೆ ವಂಚಿಸಿದ ಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ಮುಖ್ಯ ಶಿಕ್ಷಕಿ ಸೇರಿ ಮೂವರ ವಿರುದ್ಧ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಟೂರ ರಸ್ತೆ ಮಿಲತ್‌ನಗರದಲ್ಲಿರುವ ರಿಯಾಜುಲ್‌ ಉಲೂಮ್‌ ಉರ್ದು ಪ್ರೌಢಶಾಲೆ ಆಡಳಿತ ಮಂಡಳಿಯ ಕಾರ್ಯದರ್ಶಿ ಅಹ್ಮದ್‌ ಜಲಾಲ್‌ ಫೈಜಾಬಾದಿ, ಮುಖ್ಯ ಶಿಕ್ಷಕಿ ಬಿ.ಎ. ಶೇಖ ಮತ್ತು ಬಾಬು ವಂಚಿಸಿದ ಆರೋಪವನ್ನು ಎದುರಿ ಸುತ್ತಿದ್ದಾರೆ.ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಕಾಯಂ ಮಾಡುವುದಾಗಿ ಹೇಳಿ 2016 ರ ಸೆ.8 ರಂದು ಆರೋಪಿಗಳು ₹3 ಲಕ್ಷ ನಗದು ಪಡೆದಿದ್ದರು. ಇತ್ತೀಚೆಗೆ ಚೆಕ್‌ ರೂಪದಲ್ಲಿಯೂ ₹3 ಲಕ್ಷ ಪಡೆದಿ ದ್ದರು.ಅಲ್ಲದೆ ಕಳೆದ ಆರು ತಿಂಗಳಿನಿಂದ ತಿಂಗಳ ವೇತನವನ್ನೂ ನೀಡಿಲ್ಲ.ಹುದ್ದೆಯನ್ನು ಕಾಯಂ ಸಹ ಮಾಡಿಲ್ಲ ಎಂದು ವಂಚನೆಗೆ ಒಳಗಾದ ತಾಜನಗರದ ಶಿಕ್ಷಕ ಜಾಕೀರಹುಸೇನ್‌ ಮುದೇನೂರ ದೂರಿನಲ್ಲಿ ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.