ಧಾರವಾಡ –
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಕೊಡಗಿನಲ್ಲಿ ಮೊಟ್ಟೆಹೊಡೆದಿರುವುದನ್ನು ಖಂಡಿಸಿ ಧಾರವಾಡದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯ ವೇಳೆ ಕೆಲವರು ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಭಾವಚಿತ್ರವನ್ನು ಕಾಲಿ ನಲ್ಲಿ ತುಳಿದು ಅದರ ಮೇಲೆ ಮೊಟ್ಟೆಒಡೆದು ಬಳಿಕ ಉರಿ ಯುತ್ತಿರುವ ಬೆಂಕಿಯಲ್ಲಿ ಹಾಕಿ ಸುಟ್ಟು ಹಾಕಿದ್ದರು.ಈ ಘಟನೆಗೆ ಸಂಬಂಧಿಸಿದಂತೆ ಈಗ ಧಾರವಾಡ ಉಪನಗರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ 12 ಜನ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದೆ.
ಪ್ರತಿಭಟನೆ ವೇಳೆ ಸಾವರ್ಕರ್‌ಗೆ ಅವಮಾನ ಮಾಡಿದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಶಿವಾನಂದ ಸತ್ತಿಗೇರಿ ದೂರು ದಾಖಲಿಸಿದ್ದಾರೆ.ಹೀಗಾಗಿ 12 ಜನ ಕಾಂಗ್ರೆಸ್ ಕಾರ್ಯಕರ್ತರ ಮೆಲೆ ಧಾರವಾಡ ಉಪನಗರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ ಧಾರವಾಡ ಜಿಲ್ಲಾಧಿಕಾ ರಿಗಳ ಕಚೇರಿ ಎದುರು ನಿನ್ನೆ ಸಂಜೆ ನಡೆದ ಪ್ರಕರಣ, ಪ್ರತಿಭಟನೆ ವೇಳೆ ಸಾರ್ವಕರ್ ಪೋಟೋ ಸುಟ್ಡು ಮೊಟ್ಟೆ ಹೊಡೆದಿದ್ದ ಕಾಂಗ್ರೆಸ್ ಕಾರ್ಯಕರ್ತರು,ಸ್ವಾತಂತ್ರ ಹೋರಾಟಗಾರರಿಗೆ ಅವಮಾನ ಮಾಡಿರುವ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾ ಗಿದೆ
ಅಲ್ತಾಪ್ ಹಳ್ಳೂರ,ಅನಿಲ ಪಾಟೀಲ,ನಾಗರಾಜ್ ಗೌರಿ, ಆನಂದ ಸಿಂಗನಾಥ್,ಆಸಿಪ್ ಸನದಿ,ಸೌರಬ್,ಅರವಿಂದ ಏಗನಗೌಡರ್,ಮೈನುದ್ದಿನ ನಧಾಪ್,ಮನೋಜ್ ಕರ್ಜಗಿ ರಾಬರ್ಟ,12 ಜನ ಕಾಂಗ್ರೆಸ್ ಕಾರ್ಯಕರ್ತರ ಮೆಲೆ ಉಪನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನಿನ್ನೆ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಪ್ರತಿಕೃತಿ ದಹನ ಮಾಡಲಾಯಿತು.ಈ ವೇಳೆ ಕೆಲವು ಪ್ರತಿಭ ಟನಾಕಾರರು ಏಕಾಏಕಿ ವೀರ ಸಾವರ್ಕರ ಭಾವಚಿತ್ರ ತಂದು ಅದಕ್ಕೆ ಮೊಟ್ಟೆಹೊಡೆದು ಬೆಂಕಿಗೆ ಹಾಕಿ ತಮ್ಮ ಸಿಟ್ಟನ್ನು ತೀರಿಸಿಕೊಂಡಿದ್ದರು.ಸಾವರ್ಕರ್ ಅವರ ಎರಡು ಮೂರು ಫೋಟೋಗಳನ್ನು ಬೆಂಕಿಯಲ್ಲಿ ಹಾಕಿ ಸುಡಲಾಗಿತ್ತು.
https://youtu.be/4qBEuZZUtnU
ಇನ್ನೂ ಈ ಒಂದು ವಿಚಾರ ಕುರಿತು ಸಿಡಿದೆದ್ದ ಹಿಂದೂ ಸಂಘಟನೆಯ ಮುಖಂಡರು ಕಾರ್ಯಕರ್ತರು ನಗರದ ಉಪನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಿ ತಪ್ಪಿತಸ್ಥರ ಮೇಲೆ ಸೂಕ್ತ ರೀತಿಯಲ್ಲಿ ಕ್ರಮವನ್ನು ಕೈಗೊಳ್ಳ ಲು ಆಗ್ರಹ ಮಾಡಿ ದೂರನ್ನು ನೀಡಿದರು ಹೀಗಾಗಿ ಸಧ್ಯ 12 ಜನರ ಮೇಲೆ ದೂರು ದಾಖಲಾಗಿದೆ