ಹುಬ್ಬಳ್ಳಿ
ಸಾಮಾನ್ಯವಾಗಿ ಯಾರಾದರೂ ಪೊಲೀಸ್ ಠಾಣೆಗೆ ಬಂದರೆ ಅಲ್ಲಿರುವ ಪೊಲೀಸ್ ಅಧಿಕಾರಿಗಳು ನ್ಯಾಯ ಕೇಳಲು ಬಂದವರ ಸಮಸ್ಯೆ ಆಲಿಸಿ ನ್ಯಾಯ ದೊರಕಿಸಿ ಕೊಡ್ತಾರೆ. ಆದರೆ ಇಲ್ಲೊಂದು ಪೊಲೀಸ್ ಠಾಣೆಯಲ್ಲಿ ಆಗಿದ್ದೇ ಬೇರೆ. ಹೌದು ಇದಕ್ಕೇ ಹುಬ್ಬಳ್ಳಿಯ ನವನಗರದ ಪೊಲೀಸ್ ಠಾಣೆಯೇ ಸಾಕ್ಷಿ.

ನವನಗರದ ಎಪಿಎಮ್ ಸಿ ಪೊಲೀಸ್ ಠಾಣೆಯಲ್ಲಿ ಸಿಪಿಐ ಕೆಲಸ ಮಾಡುತ್ತಿರುವ ಪ್ರಬು ಸೂರಿನ್ ಮೇಲೆ ಈಗ ಗಂಭೀರವಾದ ಆರೋಪವೊಂದು ಕೇಳಿ ಬಂದಿದೆ.ತಾನಿರುವ ಠಾಣೆಯಲ್ಲಿ ಇನ್ಸ್ಪೆಕ್ಟರ್ ವಿರುದ್ಧವೇ ಈಗ ವ್ಯಕ್ತಿಯೊಬ್ಬರು ದೂರನ್ನು ದಾಖಲು ಮಾಡಿದ್ದಾರೆ. ಒಂದು ಕೋಟಿ ಚಿನ್ನಾಭರಣ ಕೊಳ್ಳೆ ಹೊಡೆದಿದ್ದಾರೆಂದು ಆರೋಪಿಸಿರುವ ನವನಗದ ನಿವಾಸಿ ಓಂಕಾರ್ ಗೌಡ ಇನ್ಸ್ಪೆಕ್ಟರ್ ಮೇಲೆ ದೂರನ್ನು ದಾಖಲು ಮಾಡಿದ್ದಾರೆ.

ಹುಬ್ಬಳ್ಳಿಯ ನವನಗರ ಠಾಣೆ ಇನ್ಸ್ಪೆಕ್ಟರ್ ಸೇರಿದಂತೆ ಹಲವರು ಮೇಲೆ ನವನಗರದ ಎಪಿಎಮ್ ಸಿ ಪೊಲೀಸ್ ಠಾಣೆಯಲ್ಲಿ ಈಗ ದೂರು ದಾಖಲಾಗಿದೆ. ಮಹಿಳೆಯೊಬ್ಬರ ಜೊತೆ ಕೂಡಿಕೊಂಡು ಇನಸ್ಪೇಕ್ಟರ್ ಒಂದು ಕೋಟಿ ಮೌಲ್ಯದ ಚಿನ್ನಾಭರಣ ಲೂಟಿ ಹೊಡೆದಿದ್ದಾರೆ.ಅಲ್ಲದೇ ಜೀವ ಬೆದರಿಕೆಯನ್ನು ಹಾಕುತ್ತಿದ್ದಾರೆಂದು ಆರೋಪಿಸಿರುವ ಓಂಕಾರಗೌಡ ಈಗ ದೂರನ್ನು ದಾಖಲು ಮಾಡಿದ್ದಾರೆ.

ಹುಬ್ಬಳ್ಳಿ ನವನವರ ಠಾಣೆ ಇನ್ಸ್ಪೆಕ್ಟರ್ ಪ್ರಭು ಸೂರಿನ್ ಸೇರಿ ಮೂರು ಜನರ ವಿರುದ್ಧ ಓಂಕಾರಗೌಡ ಎಫ್‌ಐ.ಆರ್ ದಾಖಲು ಮಾಡಿದ್ದಾರೆ..ಜೂನ್ ೨೫ ೨೦೨೦ ರಂದು ನಡೆದಿದ್ದ ಘಟನೆ ಕುರಿತಂತೆ ಈವರಗೆ ತಮಗೆ ಯಾವುದೇ ನ್ಯಾಯ ಸಿಗದ ಹಿನ್ನಲೆಯಲ್ಲಿ ಕೊನೆಗೆ ಓಂಕಾರಗೌಡ ಪೊಲೀಸ್ ಠಾಣೆಯಲ್ಲಿ ನಿನ್ನೆ ದೂರನ್ನು ದಾಖಲು ಮಾಡಿದ್ದಾರೆ.ಇನ್ನೂ ಮೂವರ ಮೇಲೆ ದೂರು ದಾಖಲಾಗಿದ್ದು ಸಾಫ್ಟವೇರ್ ಇಂಜಿನಿಯರ್ ಶಿವಲೀಲಾ ಪಾಟೀಲ್ ಜೊತೆ ಇನ್ಸ್ಪೆಕ್ಟರ್ ಎರಡು ಕೆ.ಜಿ ಚಿನ್ನಾಭರಣ ದೋಚಿದ ಆರೋಪ ಹೊತ್ತಿಕೊಂಡಿದ್ದು ಸಧ್ಯ ದೂರು ದಾಖಲಿಸಿದ ನವನಗರ ಪೊಲೀಸರ ನಂತರ ಹಿರಿಯ ಅಧಿಕಾರಿಗಳು ಮುಂದೆ ಏನು ಮಾಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ.