ಧಾರವಾಡ –
ಧಾರವಾಡದ ಹೊರವಲಯದ ಹೆದ್ದಾರಿಯಲ್ಲಿ ಯರಿಕೊಪ್ಪ ಬಳಿ ಕೋರಿಯರ ಲಾರಿ ವಾಹನಕ್ಕೆ ಬೆಂಕಿ ಹತ್ತಿಕೊಂಡು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.ಹೌದು ಬೆಂಗಳೂರಿ ನಿಂದ ಬೆಳಗಾವಿ ಕಡೆಗೆ ಪಾರ್ಸಲ್ ತುಂಬಿಕೊಂಡು ಈ ಒಂದು ಲಾರಿ ಹೊರಟಿತ್ತು ಏಕಾಏಕಿ ಯಾಗಿ ಹೊತ್ತಿಕೊಂಡ ಬೆಂಕಿ ಕ್ಷಣಾರ್ಧದಲ್ಲಿಯೇ ಬೆಂಕಿ ಆವರಿಸಿಕೊಂಡಿತು
ಹೌದು ಧಾರವಾಡದ ಯರಿಕೋಪ್ಪದ ಬಳಿಯ ರಮ್ಯಾ ರೆಸಿಡೆನ್ಸಿ ಬಳಿಯ ಬೈಪಾಸ್ ಲ್ಲಿ ಕೋರಿಯರ ವಾಹನಕ್ಕೆ ಬೆಂಕಿ ಹತ್ತಿಕೊಂಡು ಲಾರಿ ಸಂಪೂರ್ಣವಾಗಿ ಸುಟ್ಟು ಎಲ್ಲಾ ಪಾರ್ಸೆಲ್ ಗಳು ಬೆಂಕಿಗೆ ಆಹುತಿಯಾದವು
ಇನ್ನೂ ನೋಡು ನೋಡುತ್ತಲೇ ಅಪಾರ ಪ್ರಮಾಣದ ಬೆಂಕಿ ಹೊತ್ತುಕೊಂಡು ಲಾರಿಯನ್ನು ಆವರಿಸಿತು ಲಕ್ಷಾಂತರ ರೂಪಾಯಿ ಮೌಲ್ಯದ ಕೋರಿಯರ್ ಪಾರ್ಸಲ್ ಗಳು ಸುಟ್ಟ ಕರಕಲಾಗಿವೆ.
ಇನ್ನೂ ಸುದ್ದಿ ತಿಳಿದ ಧಾರವಾಡ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮಗಳನ್ನು ಕೈಗೊಂಡರು