ಧಾರವಾಡ –
ಹೌದು ಕಾಲು ಮುರಿದುಕೊಂಡಿದ್ದ ಒಂದೂವರೆ ವರ್ಷದ ಹಸುವಿನ ಕರುವಿಗೆ ಧಾರವಾಡದಲ್ಲಿ ಯಶಶ್ವಿಯಾಗಿ ಆಪರೇಶನ್ ಮಾಡಲಾಗಿದೆ.ಹಾನಗಲ್ ತಾಲ್ಲೂಕಿನ ಅಕ್ಕಿಆಲೂರಿನಲ್ಲಿ ಆನಂದ ಮುತ್ತಿನಕಂತಿಮಠ ಎಂಬುವರ ಹಸುವಿನ ಮರಿಯೊಂದು ನಡೆದಾಡುವಾಗ ಆಕಸ್ಮಾತಾಗಿ ಕಾಲು ಮುರಿದುಕೊಂಡಿತ್ತು ಹೀಗಾಗಿ ಆತಂಕಗೊಂಡಿದ್ದ ಆನಂದ ಅವರು ಕೂಡಲೇ ಆ ಒಂದು ಕರುವನ್ನು ಧಾರವಾಡಗೆ ಕರೆದುಕೊಂಡು ಬಂದಿದ್ದಾರೆ.
ನಗರದಲ್ಲಿರುವ ಜಿಲ್ಲಾ ಪಶು ಆಸ್ಪತ್ರೆಗೆ ತಗೆದುಕೊಂಡು ಬಂದರು ಕೂಡಲೇ ಇದನ್ನು ಪರಿಶೀಲನೆ ಮಾಡಿದ ಆಸ್ಪತ್ರೆಯ ವೈಧ್ಯ ಡಾ ತಾರಾಸಿಂಗ್ ರಾಠೋಡ ಮತ್ತು ಡಾ ಚಾಮರಾಜ ಪೂಜಾರ ನೇತ್ರತ್ವದಲ್ಲಿನ ಟೀಮ್ ಆಪರೇ ಶನ್ ಮಾಡಿದರು.ಎಲುಬು ಮುರಿದುಕೊಂಡಿದ್ದ ಒಂದೂ ವರೆ ವರ್ಷದ ಹಸುವಿಗೆ ಯಶಶ್ವಿಯಾಗಿ ಆಪರೇಶನ್ ಮಾಡಿ ಗುಣಮುಖ ಮಾಡಿದರು ಇದು ಸರ್ಕಾರಿ ಆಸ್ಪತ್ರೆ ಯೊಂದರಲ್ಲಿ ಈ ಒಂದು ಆಪರೇಶನ್ ವೈಧ್ಯರಿಂದ ನಡೆದಿದ್ದು ವಿಶೇಷವಾಗಿದ್ದ ಇನ್ನೂ ಒಂದೂವರೆ ವರ್ಷದ ಹಸುವಿಗೆ ಆಪರೇಶನ್ ಸಕ್ಸಸ್ ಮಾಡಿದ ವೈಧ್ಯರಿಗೆ ಹಸು ವಿನ ಮಾಲೀಕರಾದ ಆನಂದ ಮುತ್ತಿನಕಂತಿಮಠ ಮತ್ತು ಪ್ರಭು ಹಿರೇಮಠ ಧನ್ಯವಾದಗಳನ್ನು ಹೇಳಿದ್ದಾರೆ.
https://youtu.be/7z-ymy0zf-o
ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆ ವೈಧ್ಯರು ಎಂದರೆ ಇಲ್ಲಿ ಯಾವುದೇ ಸೌಲಭ್ಯಗಳು ಇರೊದಿಲ್ಲ ವೈಧ್ಯರು ಕಾಳಜಿ ಮಾಡೋದಿಲ್ಲ ಎಂಬ ಮಾತುಗಳನ್ನು ಸಾರ್ವಜನಿಕರು ಹೇಳುತ್ತಾರೆ ಆದರೆ ಈ ಒಂದು ಯಶಶ್ವಿ ಆಪರೇಶನ್ ಮಾತನಾಡುವವರಿಗೆ ಉತ್ತರವಾಗಿದ್ದು ಧಾರವಾಡ ಜಿಲ್ಲಾ ಪಶು ಆಸ್ಪತ್ರೆಯ ವೈಧ್ಯರ ಟೀಮ್ ಕಾಲು ಮುರಿದುಕೊಂಡ ಹಸುವಿಗೆ ಮರು ಜೀವ ನೀಡಿ ಪುನಃ ಎಂದಿನಂತೆ ನಡೆದಾ ಡುವಂತೆ ಮಾಡಿ ಗುಣಮುಖ ಮಾಡಿದ್ದು ಶ್ವಾಘನೀಯ ವಿಚಾರವಾಗಿದೆ.