ಹುಬ್ಬಳ್ಳಿ –

ಮಳೆಯಿಂದಾಗಿ ಹಾಳಾದ ರಸ್ತೆಗಳಲ್ಲಿನ ತೆಗ್ಗು ಗುಂಡಿಗಳನ್ನು ಮಣ್ಣು ಹಾಕಿ ಮುಚ್ಚುವ ಮೂಲಕ ಹುಬ್ಬಳ್ಳಿಯಲ್ಲಿ ವಿಭಿನ್ನವಾಗಿ ಪ್ರತಿಭಟನೆ ಮಾಡಲಾ ಯಿತು. ಕೈ ಪಕ್ಷದಿಂದ ಈ ಒಂದು ಪ್ರತಿಭಟನೆ ಮಾಡಿ ನಂತರ ರಸ್ತೆಯಲ್ಲಿನ ತೆಗ್ಗು ಗುಂಡಿಗಳನ್ನು ಮುಚ್ಚಲಾ ಯಿತು.

ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ನೇತ್ರತ್ವ ದಲ್ಲಿ ಈ ಒಂದು ಪ್ರತಿಭಟನೆಯನ್ನು ಮಾಡಲಾಯಿ ತು. ನಗರದ ಗೋಕುಲ ರಸ್ತೆಯಲ್ಲಿನ ರವಿನಗರ ಕ್ರಾಸ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಸ್ತೆಗಳು ಹಾಳಾಗಿದ್ದು ಅಲ್ಲದೇ ರಸ್ತೆ ಮಧ್ಯದಲ್ಲಿಯೇ ತೆಗ್ಗು ಗುಂಡಿಗಳು ಬಿದ್ದಿದ್ದು

ಹೀಗಾಗಿ ಇದರಿಂದಾಗಿ ಸಾರ್ವಜನಿಕರಿಗೆ ಸಾಕಷ್ಟು ಪ್ರಮಾಣದಲ್ಲಿ ತೊಂದರೆಯಾಗುತ್ತಿದ್ದು ಇದನ್ನು ಅರಿತ ಕಾಂಗ್ರೇಸ್ ಪಕ್ಷದ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಮತ್ತು ಟೀಮ್ ನವರು ಎರಡು ದಿನಗಳ ಹಿಂದೆಯಷ್ಟೇ ಜಗದೀಶ ಶೆಟ್ಟರ ಹಾಗೂ ನರೇಂದ್ರ ಮೋದಿ ಅವರ ಕಟೌಟಗೆ ಸನ್ಮಾನ ಮಾಡಿ ಪ್ರತಿಭಟನೆ ಮಾಡಿದ್ದರು ಇದರಿಂದಾಗಿ ಎಚ್ಚತ್ತು ಕೊಳ್ಳದ ಹಿನ್ನಲೆಯಲ್ಲಿ ಇಂದು ಮತ್ತೆ ಸರ್ಕಾರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಗೆ ಅಧಿಕಾ ರಿಗಳ ವಿರುದ್ದ ವಿಭಿನ್ನವಾಗಿ ಪ್ರತಿಭಟನೆ ಮಾಡಿ ತಾವೇ ಸ್ವತಃ ಲಾರಿಗಳಲ್ಲಿ ಮಣ್ಣುಗಳನ್ನು ತಗೆದು ಕೊಂಡು ಬಂದು ತೆಗ್ಗಿಗೆ ಹಾಕಿದರು.ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗೋಕುಲ ರಸ್ತೆಯ ರವಿನಗರ್ ಕ್ರಾಸ್ ಬಳಿ ರಸ್ತಯಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿದ್ದು ದುರಸ್ಥಿ ಕಾರ್ಯವನ್ನು ಮಾಡಿದರು.

ಮುಂಬರುವ ಒಂದು ತಿಂಗಳಿನೊಳಗಾಗಿ ಕಾಂಕ್ರೀಟ್ ರಸ್ತೆ ಮಾಡದೇ ಇದ್ದರೆ ಕಾಂಗ್ರೆಸ ಪಕ್ಷದ ಕಾರ್ಯಕ ರ್ತರು ಗೋಕುಲ ರೋಡಿನಲ್ಲಿ ಕುಳಿತುಕೊಂಡು ನಾಗರಿಕರಲ್ಲಿ ಬಿಕ್ಷಾಟನೆ ಮಾಡಿ ರಸ್ತೆಯನ್ನು ನವಿಕ ರಿಸಲಾಗುವುದು ಎಂದು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಈ ಒಂದು ಸಂದ ರ್ಭದಲ್ಲಿ ಪಾಲಿಕೆಯ ಮಾಜಿ ಮೇಯರ್ ವೆಂಕಟೇಶ ಮೇಸ್ತ್ರಿ, ಮಲ್ಲಿಕಾರ್ಜುನ ಯಾತಗೇರಿ,ಮಣಿಕಂಠ ಗುಡಿಹಾಳ, ಅಭಿಷೇಕ ಶಿಂಘೆ, ದೀಪಕ ಶಿರೊಳಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
