ಬೆಂಗಳೂರು –
ಹೌದು ಸರ್ಕಾರಿ ಶಾಲೆಗಳನ್ನು ಉಳಿಸುವುದಕ್ಕೆ ಇದುವ ರೆಗೂ ಹಲವು ಚಿತ್ರಗಳಲ್ಲಿ ಹೋರಾಟ ಮಾಡಲಾಗಿದೆ.ಈಗ ಪ್ರಿಯಾಂಕಾ ಉಪೇಂದ್ರ ಸಹ ‘ಮಿಸ್ ನಂದಿನಿ’ ಎಂಬ ಚಿತ್ರದ ಮೂಲಕ ಈ ಹೋರಾಟಕ್ಕೆ ಕೈಜೋಡಿಸಿದ್ದಾರೆ.ಈ ಚಿತ್ರ ಬರೀ ಕನ್ನಡವಷ್ಟೇ ಅಲ್ಲ,ಹಿಂದಿ,ತಮಿಳು,ತೆಲುಗು, ಮಲಯಾಳಂ ಅಲ್ಲದೆ ಬಂಗಾಲಿ ಭಾಷೆಯಲ್ಲೂ ಮೂಡಿ ಬರುತ್ತಿದೆ.ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಇಂಥದ್ದೊಂದು ಪಾತ್ರ ಕೊಟ್ಟಿದ್ದಕ್ಕೆ ನಿರ್ದೇಶಕರಿಗೆ ಥ್ಯಾಂಕ್ಸ್ ಹೇಳುವ ಪ್ರಿಯಾಂಕಾ,’ನಗರದ ಟೀಚರ್ ಒಬ್ಬರು ಹಳ್ಳಿ ಶಾಲೆಯನ್ನು ಪರಿವರ್ತನೆ ಮಾಡುವ ಕಥೆ ಇದು.

ನಾನು ಅಮೆರಿಕಾದ ಸರ್ಕಾರಿ ಶಾಲೆಯಲ್ಲಿ ಓದಿದವಳು. ಅಲ್ಲಿ ಎಷ್ಟು ಚೆನ್ನಾಗಿರುತ್ತದೆ ಅಂದರೆ ಖಾಸಗಿ ಶಾಲೆಗಳಿಗೆ ವ್ಯತ್ಯಾಸವೇ ಇರುವುದಿಲ್ಲ.ಆದರೆ,ಇಲ್ಲಿ ಹಾಗಿಲ್ಲ.ಏನೇನೋ ಸಮಸ್ಯೆಗಳಿಂದಾಗಿ ಸರ್ಕಾರಿ ಶಾಲೆಗಳೆಂದರೆ ಒಂಥರಾ ನೋಡುವ ಪರಿಸ್ಥಿತಿ ಇದೆ.ಸರ್ಕಾರಿ ಶಾಲೆಗಳಿಗೆ ಕೋಟ್ಯಂ ತರ ಹಣ ಬರುತ್ತದೆ.ಆದರಲ್ಲಿ ದುರುಪಯೋಗವಾಗು ವುದೇ ಹೆಚ್ಚು.ಅದನ್ನು ಹೇಗೆ ಸರಿ ಮಾಡುವುದು ಆ ವಿಷಯವನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡುತ್ತಿ ದ್ದೇವೆ.ಮನರಂಜನೆ ಜತೆಗೆ ಸಂದೇಶವೂ ಇದೆ. ನನ್ನ ಪಾತ್ರ ಮೇಲ್ನೋಟಕ್ಕೆ ಸಾಫ್ಟ್ ಆದರೂ ಬಹಳ ಗಟ್ಟಿಯಾಗಿದೆ’ ಎನ್ನುತ್ತಾರೆ ಪ್ರಿಯಾಂಕಾ.ಈ ಚಿತ್ರದಲ್ಲಿ ಅವರ ಅಭಿನಯವ ನ್ನಷ್ಟೇ ನೋಡಬಹುದು ಧ್ವನಿಯನ್ನು ಕೇಳುವಂತಿಲ್ಲ. ಡಬ್ಬಿಂಗ್ ಯಾಕೆ ಮಾಡಿಲ್ಲ ಎಂದರೆ ‘ಭಾಷೆಯಲ್ಲಿ ಇನ್ನೂ ಸ್ಪಷ್ಟತೆ ಇಲ್ಲ. ಹಾಗಾಗಿ, ಡಬ್ಬಿಂಗ್ ಮಾಡುವುದಕ್ಕೆ ನಾನೇ ಹಿಂದೇಟು ಹಾಕುತ್ತೇನೆ.ಇತ್ತೀಚೆಗೆ ಒಂದು ಧಾರಾವಾಹಿಯ ಪ್ರೋಮೋಗೆ ಡಬ್ ಮಾಡಿದ್ದೇನೆ.ಮುಂದಿನ ದಿನಗಳಲ್ಲಿ ಚಿತ್ರಕ್ಕೂ ಡಬ್ ಮಾಡುವ ಆಸೆ ಇದೆ’ ಎನ್ನುತ್ತಾರೆ ಅವರು.
‘ಮಿಸ್ ನಂದಿನಿ’ ಚಿತ್ರವನ್ನು ಗುರುದತ್ ಬರೆದು ನಿರ್ದೇಶಿಸಿ ದ್ದಾರೆ.ವಿಜಯ ಪ್ರೊಡಕ್ಷನ್ಸ್ ನಡಿ ನೀಲಕಂಠಸ್ವಾಮಿ ನಿರ್ವಿುಸುತ್ತಿದ್ದಾರೆ.ಚಿತ್ರಕ್ಕೆ ಸಾಯಿಸತೀಶ್ ಸಂಗೀತ ಸಂಯೋಜಿಸಿದರೆ ವೀನಸ್ ನಾಗರಾಜ್ ಛಾಯಾಗ್ರಹಣ ಮಾಡಿದ್ದಾರೆ.ಚಿತ್ರದಲ್ಲಿ ಭವ್ಯಾ ಡ್ಯಾನಿ ಕುಟ್ಟಪ್ಪ ಮುಂತಾದ ವರು ನಟಿಸಿದ್ದಾರೆ.