ಕಲಘಟಗಿ –
ಕಬ್ಬಿನ ಗದ್ದೆಯೊಂದಕ್ಕೆ ಬೆಂಕಿ ಬಿದ್ದ ಘಟನೆ ಧಾರವಾ ಡ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದಹೊನ್ನ ಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದಲ್ಲಿ ಹಸಿ ಕಬ್ಬಿನ ತೋಟಕ್ಕೆ ಬೆಂಕಿ ತಗುಲಿದೆ. ರೈತರ ಗದ್ದೆಗೆ ಭಾನುವಾ ರ ಬೆಳಿಗ್ಗೆ ಬೆಂಕಿ ತಗುಲಿದ್ದು ಗ್ರಾಮದ ಮಣ್ಣಪ್ಪ ನಿಂಗಪ್ಪ ಬನವಣ್ಣನವರ ಎಂಬ ರೈತರ ಸುಮಾರು 4 ಎಕರೆ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಪೂರ್ತಿ ಬೆಳೆ ನಾಶವಾಗಿದೆ.

ಬೆಂಕಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಇನ್ನೂ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ಅಧಿಕಾರಿಗಳು ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ

4 ಎಕರೆಯಲ್ಲಿ ಬೆಳೆದ ಕಬ್ಬಿಗೆ ಬೆಂಕಿ ತಗುಲಿದ ಪರಿ ಣಾಮ ಲಕ್ಷಾಂತರ ಹಾನಿಯಾಗಿದೆ ಪರಿಹಾರ ನೀಡ ಬೇಕೆಂದು ರೈತರು ಮನವಿ ಮಾಡಿದ್ದು ಇನ್ನೂ ಈ ಕುರಿತು ಪೊಲೀಸರು ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು