ಹುಬ್ಬಳ್ಳಿ –
ಹುಬ್ಬಳ್ಳಿಯಲ್ಲಿ ಸಾರಿಗೆ ಬಸ್ ಗೆ ಒಮ್ಮೆಲೇ ಬೆಂಕಿ ತಗುಲಿದ್ದು ನಂತರ ಬಸ್ ಚಾಲಕನ ಜಾಗರೂಕತೆ ಯಿಂದ ಅನಾಹುತ ತಪ್ಪಿದೆ.

ಹುಬ್ಬಳ್ಳಿಯ ಗೋಕುಲ ರಸ್ತೆಯ KSRTC ಡಿಪೋ ಬಳಿ ಈ ಒಂದು ಘಟನೆ ನಡೆದಿದೆ.

ಡೀಸೆಲ್ ಪೈಪ್ ಕಟ್ ಆದ ಪರಿಣಾಮ ಒಮ್ಮೆಲೇ ಬಸ್ ನಲ್ಲಿ ಕಾಣಿಸಿಕೊಂಡಿದೆ ಬೆಂಕಿ.ಸಿಬಿಟಿ ಯಿಂದ ಮಂಜುನಾಥ್ ನಗರಕ್ಕೆ ಹೊರಟಿದ್ದ ಸಾರಿಗೆ ಬಸ್.

ಬಸ್ ನಲ್ಲಿದ್ದ 30 ರಿಂದ 40 ಪ್ರಯಾಣಿಕರು ಸೇಫ್ ಆಗಿ ಬಸ್ ನಿಂದ ಕೆಳಗೆ ಇಳಿಸಲಾಗಿದೆ.ಬೆಂಕಿ ಹತ್ತಿದ ತಕ್ಷಣವೇ ಪ್ರಯಾಣಿಕರನ್ನ ಹೊರಹಾಕಿ ಬೆಂಕಿ ನಂದಿ ಸಿದರು ಬಸ್ ಸಿಬ್ಬಂದಿ
ಗೋಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ