ಧಾರವಾಡ –
ಕರ್ನಾಟಕ ರಾಜ್ಯ ಸರಕಾರಿ ಎಸ್.ಸಿ. ಮತ್ತು ಎಸ್.ಟಿ. ನೌಕರರ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ,ನೌಕರರ ನೇತಾರ ಡಿ.ಶಿವಶಂಕರ ಅವರು ತಮ್ಮ ಸರಕಾರಿ ಸೇವೆ ಯಿಂದ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಅಭಿನಂದನಾ ಸಮಾರಂಭದಲ್ಲಿ ಅವರನ್ನು ಧಾರವಾಡ ಜಿಲ್ಲಾ ಘಟಕದ ಪರವಾಗಿಯೂ ವಿಶೇಷವಾಗಿ ಗೌರವಿಸಿ ಬೀಳ್ಕೊಡಲಾಯಿತು.
ಬಂಡಾಯ ಸಾಹಿತಿ,ದಲಿತ ಕವಿ,ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ಮಾಜಿ ಅಧ್ಯಕ್ಷ ದಿವಂಗತ ಡಾ.ಡಿ.ಸಿದ್ಧಲಿಂಗಯ್ಯ ಅವರ ಕಿರಿಯ ಸಹೋದರರಾಗಿದ್ದ ಡಿ.ಶಿವಶಂಕರ ಅವರು ಸರಕಾರಿ ನೌಕರರ ಧ್ವನಿಯಾಗಿ ನಿರಂತರ ಹೋರಾಟದ ನೆಲೆಯಿಂದಲೇ ಗುರುತಿಸಿಕೊಂಡಿದ್ದರು.ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ ನೌಕರರ ಸಂಘಟನೆಗೆ ಬಲ ತುಂಬಿದ್ದ ಡಿ.ಶಿವಶಂಕರ ಅವರ ಸಂಘಟನಾ ಶಕ್ತಿಯನ್ನು ಪಾಲ್ಗೊಂಡ ಎಲ್ಲ ಗಣ್ಯರೂ ಶ್ಲ್ಯಾಘಿಸಿದರು.
ಕರ್ನಾಟಕ ರಾಜ್ಯ ಸರಕಾರಿ ಎಸ್.ಸಿ.ಮತ್ತು ಎಸ್.ಟಿ. ನೌಕರರ ಸಮನ್ವಯ ಸಮಿತಿಯ ಧಾರವಾಡ ಜಿಲ್ಲಾ ಘಟಕದ ಪರವಾಗಿ ಅಧ್ಯಕ್ಷ ಎಸ್.ಬಿ. ಕೇಸರಿ,ಪ್ರಧಾನ ಕಾರ್ಯದರ್ಶಿ ದೇವಿದಾಸ ಶಾಂತಿಕರ,ಪದಾಧಿಕಾರಿಗಳಾದ ರಮೇಶ ದಂಡಿಗೆದಾಸರ,ಐ.ಎನ್.ಪಶುಪತಿಹಾಳ,ಸುರೇಶ ಬೆಟಗೇರಿ,ಕಳ್ಳಿಮನಿ ಮತ್ತಿತರರು ಡಿ.ಶಿವಶಂಕರ ಅವರಿಗೆ ಶಾಲು ಹೊದಿಸಿ ಗೌರವಿಸಿ,ನೆನಪಿನ ಕಾಣಿಕೆ ನೀಡಿ ಗೌರವಿಸಿ ಬೀಳ್ಕೊಡುಗೆಯ ಅಭಿನಂದನೆ ಸಲ್ಲಿಸಿದರು.