ಹುಬ್ಬಳ್ಳಿ –
ಉತ್ತರಾಖಂಡ ರಾಜ್ಯದ ಉಸ್ತುವಾರಿಯಾಗಿ ಯಶಶ್ವಿ ಯಿಂದ ಪಕ್ಷವು ಅಧಿಕಾರವನ್ನು ಹಿಡಿಯುವಲ್ಲಿ ಕಾರ್ಯ ನಿರ್ವಹಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭಾರತೀಯ ಜನತಾ ಪಕ್ಷದ ಅಭೂತಪೂರ್ವ ವಿಜಯದ ರೂವಾರಿ ಗಳಾಗಿದ್ದಾರೆ.ಹೌದು ಕೇಂದ್ರ ಸಂಸದೀಯ ವ್ಯವಹಾರಗಳ ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಹಾಗೂಉತ್ತರಾಖಂಡ ಚುನಾವಣಾ ಉಸ್ತುವಾರಿ ಪ್ರಲ್ಹಾದ ಜೋಶಿಯವರು ಉತ್ತರಾಖಂಡ ದಿಂದ ಇಂದು ಬೆಳಿಗ್ಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಅಭೂತಪೂರ್ವ ಯಶಶ್ಸಿನ ಬಳಿಕ ತವರಿಗೆ ಆಗಮಿಸಿದ ಸಂದರ್ಭದಲ್ಲಿ ಸಚಿವರನ್ನು ಪಕ್ಷದ ವತಿಯಿಂದ ಅದ್ದೂರಿ ಯಾಗಿ ಜಿಲ್ಲೆಯ ಪಕ್ಷದ ಪರವಾಗಿ ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ ಇವರಿಂದ ಸ್ವಾಗತಿಸಲಾಯಿತು ಬೈಕ್ ರ್ಯಾಲಿ ಹಾಗೂ ಪ್ರಮುಖ ವೃತ್ತಗಳಲ್ಲಿ ಸ್ವಾಗತದ ಮೂಲಕ ಬರಮಾಡಿಕೊಳ್ಳಲಾಯಿತು.
ಚುನಾವಣೆಯಲ್ಲಿ ಬಿಜೆಪಿ ಅದ್ಭುತ ಗೆಲುವು ಸಾಧಿಸಿದೆ. ಒಂದು ಕಡೆ ಸಮುದ್ರ ತಟದಲ್ಲಿ ಗೆಲುವು ಸಾಧಿಸಿದ್ದು. ಮತ್ತೊಂದೆಡೆ ಗುಡ್ಡಗಾಡು ಪ್ರದೇಶದಲ್ಲಿ ಅಧಿಕಾರಕ್ಕೆ ತಂದಿದ್ದು ಪ್ರಲ್ಹಾದ ಜೋಶಿಯವರ ಚಾಣಾಕ್ಷತನದಿಂದ. ಉತ್ತರಾಖಂಡದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ಉತ್ತರಾಖಂಡದ ಬಿಜೆಪಿ ಉಸ್ತುವಾರಿಯಾ ಗಿದ್ದ ಪ್ರಲ್ಹಾದ ಜೋಶಿ ಅವರನ್ನು ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಸ್ವಾಗತಿಸಿದರು.
ನಗರಕ್ಕೆ ಸಚಿವರು ನಮ್ಮ ನಾಯಕರು ಆಗಮಿಸುತ್ತಿದ್ದಾ ರೆಂಬ ಮಾಹಿತಿ ತಿಳಿಯುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರು ನಾಯಕರು ಸೇರಿ ದಂತೆ ಹಲವರು ವಿಮಾನ ನಿಲ್ದಾಣಕ್ಕೆ ಆಗಮಿಸಿ ನಾಯ ಕರನ್ನು ಸ್ವಾಗತಿಸಲು ತುದಿಗಾಲಲ್ಲಿ ನಿಂತುಕೊಂಡಿದ್ದರು.
ಇನ್ನೂ ನಿಲ್ದಾಣಕ್ಕೆ ಆಗಮಿಸಿ ಹೊರಗೆ ಬರುತ್ತಿದಂತೆ ವಿಮಾನ ನಿಲ್ದಾಣದಿಂದ ತೆರೆದ ವಾಹನದಲ್ಲಿ ಜೋಶಿಯ ವರನ್ನು ಕರೆತಂದ ಮೊದಲಿಗೆ ರಾಮಮನೋಹರ ಲೋಹಿ ಯಾ ನಗರದ ವೃತ್ತದಲ್ಲಿ ಸುನಿಲ್ ಜೋಗಣ್ಣನವರ ತಂಡ ಸಚಿವರಿಗೆ ಪುಷ್ಪವೃಷ್ಟಿ ಮೂಲಕ ಜಯಘೋಷದೊಂದಿಗೆ ಸ್ವಾಗತಿಸಿದರು.ನಂತರ ನೆಹರೂ ನಗರ ವಾಟರ್ ಟ್ಯಾನ್ಕ್ ಬಳಿ ಸತೀಶ್ ಹಾನಗಲ್ ಹಾಗೂ ಅವರ ಮಿತ್ರರುಗಳು ಅಪಾರ ಅಭಿಮಾನಿಗಳೊಂದಿಗೆ ಬ್ರಹತ್ ಹೂವಿನಹಾರ ಹಾಕಿ ಇಡೀ ಬೈಕ್ ರ್ಯಾಲಿಯನ್ನು ಸ್ವಾಗತಿಸಿ ಸಿಹಿ ಹಂಚಿ ದರು.
ಮುಂದೆ ಮಂಜುನಾಥ ನಗರ ವೃತ್ತದಲ್ಲಿ ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ ಅಕ್ಕಿ ವಕೀಲರು ತಮ್ಮ ತಂಡದೊಂದಿಗೆ ಜಯಘೋಷದೊಂದಿಗೆ ಸ್ವಾಗತಿಸಿದರು.ಗೋಕುಲ ರಸ್ತೆ ಕೈಗಾರಿಕಾ ಎಸ್ಟೇಟ್ ಮೊದಲ ಗೇಟ್ ಬಳಿ ಬಿಜೆಪಿ ಕೈಗಾರಿ ಕಾ ಪ್ರಕೋಷ್ಟದ ಅಧ್ಯಕ್ಷ ನರೇಂದ್ರ ಕುಲಕರ್ಣಿಯವರು ಕೈಗಾರಿಕೋದ್ಯಮಿಗಳೊಂದಿಗೆ ಸಚಿವರನ್ನು ಬರಮಾಡಿ ಕೊಂಡು ಸಿಹಿ ತಿನ್ನಿಸಿ ಸ್ವಾಗತಿಸಿದರು.ನಂತರ ರಸ್ತೆ ಸಾರಿಗೆ ಡಿಪೋ ಬಳಿ ಪಾಲಿಕೆ ಸದಸ್ಯ ವಿನಾಯಕ ಡೊಂಗಡಿ ಬೃಹತ್ ಪುಷ್ಪ ಮಾಲೆ ಹಾಕುವುದರ ಮೂಲಕ ಸ್ವಾಗತಿಸಿ ದರೇ,ದೇಶಪಾಂಡೆ ನಗರದ ಶಾರದಾ ಹೋಟೆಲ್ ವೃತ್ತದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಶ್ರೀಮತಿ ಮೀನಾಕ್ಷಿ ವಂಟ ಮೂರಿ ಅವರು ನೂರಾರು ಕಾರ್ಯಕರ್ತರೊಂದಿಗೆ ಸಿಹಿ ಹಂಚಿ ಸ್ವಾಗತಿಸಿದರು.
ಭವಾನಿ ನಗರದ ರಾಯರ ಮಠದ ಮುಂದೆ ಪಾಲಿಕೆ ಸದಸ್ಯ ವೀರಣ್ಣ ಸವಡಿ, ಹೋಟೆಲ್ ಉದ್ದಿಮೆದಾರರಾದ ಪ್ರಸಾದ್ ಶೆಟ್ಟಿ, ಮತ್ತು ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು.ಈ ಎಲ್ಲ ಕಾರ್ಯಕ್ರಮಗಳಲ್ಲಿ ಶಾಕರುಗಳಾದ ಅರವಿಂದ ಬೆಲ್ಲದ್, ಅಮೃತ ದೇಸಾಯಿ, ಜಿಲ್ಲಾಧ್ಯಕ್ಷ ಸಂಜಯ ಕಪಟಕರ್, ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಮಜ್ಜಗಿ, ಪಾಲಿಕೆ ಸದಸ್ಯ ವಿಜಯಾನಂದ ಶೆಟ್ಟಿ, ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ಸಂತೋಷ್ ಚವ್ಹಾಣ್,ಶಿವು ಮೆಣಸಿನಕಾಯಿ,ಲಕ್ಶ್ಮಣ ಗಂಡಗಾಳೀ ಕರ್, ಅನೂಪ್ ಬೀಜವಾದ, ಮಹೇಶ್ ಚಿಕ್ಕವೀರಮಠ, ಗೋಪಾಲ್ ಬದ್ದಿ, ಪಕ್ಷದ ಎಲ್ಲ ಅಭಿಮಾನಿಗಳು, ಹಿತೈಷಿ ಗಳು,ಕಾರ್ಯಕರ್ತರು, ಪ್ರಮುಖರು ಹಾಗೂ ಪದಾಧಿಕಾ ರಿಗಳು ಭಾಗವಹಿಸಿದ್ದರು.ಒಟ್ಟಾರೆ ದೂರದ ಉತ್ತರಾ ಖಾಂಡ ರಾಜ್ಯದ ಉಸ್ತುವಾರಿ ವಹಿಸಿಕೊಂಡು ಯಶಶ್ವಿ ಯಾಗಿ ನಿಭಾಯಿಸಿ ಕೊಟ್ಟ ಜವಾಬ್ದಾರಿಯಿಂದ ಪಕ್ಷವು ಅಧಿಕಾರ ಗದ್ದುಗೆ ಏರಲು ಪ್ರಮುಖ ಕಾರ್ಯ ಮಾಡಿದ ಮೋದಿ ಸಾಮ್ರಾಜ್ಯದ ನಯಾ ಚಾಣಕ್ಯರಿಗೆ ಆತ್ಮೀಯ ಅದ್ದೂರಿ ಸ್ವಾಗತ ಸಿಕ್ಕಿತು.
ಕ್ಯಾಮೆರಾ ರವಿ ಗೌಡರ,ಶ್ರೀಕಾಂತ ಜೊತೆ ಪರಶುರಾಮ ಗೌಡರ,ಮಂಜುನಾಥ ಸರ್ವಿ ಸುದ್ದಿ ಸಂತೆ ಡೆಸ್ಕ್ ಹುಬ್ಬಳ್ಳಿ.