ಬೆಂಗಳೂರು –
ಗ್ರಾಮೀಣ ಕೃಪಾಂಕ ರಹಿತ ಸರ್ಕಾರಿ ಶಾಲಾ ಶಿಕ್ಷಕರ ಬಹು ದಿನಗಳ ಬೇಡಿಕೆಯೊಂದು ಶೀಘ್ರದಲ್ಲೇ ಈಡೇರಲಿದೆ ಹೌದು ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಡಿ ಇಟ್ಟಿದ್ದು ಮಾಹಿತಿಗಳನ್ನು ಕಲೆ ಹಾಕುತ್ತಿದ್ದು ಶೀಘ್ರದಲ್ಲೇ ಶಿಕ್ಷಕರ ಬೇಡಿಕೆ ಈಡೇರಿಸಲಿದೆ.
ಕೃಪಾಂಕರಹಿತವಾಗಿ ನೇಮಕಗೊಂಡಿರುವ ಶಾಲಾ ಶಿಕ್ಷಕರಿಗೆ ಸೇವಾ ಹಿರಿತನ ನಿಗದಿಪಡಿಸಬೇಕೆಂಬ ಬೇಡಿಕೆ ಈ ಹಿಂದಿ ನಿಂದಲೂ ಕೇಳಿ ಬರುತ್ತಿದ್ದು ಇದನ್ನು ಪರಿಗಣಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅಗತ್ಯ ಮಾಹಿತಿಗಳನ್ನು ಕಲೆ ಹಾಕುತ್ತಿದ್ದು ಕಾರ್ಯ ಮುಕ್ತಾಯ ವಾಗಿದ್ದು ಶೀಘ್ರದಲ್ಲೇ ಹೊರ ಬೀಳಲಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರವರಿಗೆ ಪತ್ರ ಬರೆದಿದ್ದು 2003ರ ನಂತರ ನೇಮಕಗೊಂಡಿರುವ ಗ್ರಾಮೀಣ ಕೃಪಾಂಕ ರಹಿತ ಶಿಕ್ಷಕರ ವಿವರ ಕೇಳಿದ್ದು ಇದರ ಮಾಹಿತಿಯನ್ನು ಸಂಪೂರ್ಣವಾಗಿ ನೀಡಿದ್ದು ಶೀಘ್ರದಲ್ಲೇ ಬೇಡಿಕೆ ಈಡೇರಿಸುವ ಅಧಿಕೃತ ಆದೇಶ ವೊಂದು ಇಲಾಖೆಯಿಂದ ಹೊರ ಬೀಳಲಿದೆ.