ಹುಬ್ಬಳ್ಳಿ –
ಒಂದೆಡೆ ಸಿಕ್ಕಾಪಟ್ಟಿ ಬಿಸಿಲು ಮತ್ತೊಂದೆಡೆ ಮಹಾ ಶಿವರಾತ್ರಿ ಹಬ್ಬದ ಆಚರಣೆ ಇದರ ನಡುವೆ ಹುಬ್ಬಳ್ಳಿಯ ಐತಿಹಾಸಿಕ ಸಿದ್ದಾರೂಢ ಸ್ವಾಮಿಯ ಜಾತ್ರೆ.ಹೌದು ಮಹಾ ಶಿವರಾತ್ರಿ ದಿನದ ಅಂಗವಾಗಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಜಾತ್ರೆಗೆ ಜಿಲ್ಲೆಯಿಂದ ಮತ್ತು ಸುತ್ತಮುತ್ತಲಿನ ಜಿಲ್ಲೆಯಿಂದ ಬಂದ ಭಕ್ತರಿಗೆ ಹುಬ್ಬಳ್ಳಿಯಲ್ಲಿ ಉಚಿತವಾಗಿ ಮಜ್ಜಿಗೆಯನ್ನು ವಿತರಣೆ ಮಾಡಲಾಯಿತು.

ಸಾಕಷ್ಟು ಪ್ರಮಾಣದಲ್ಲಿ ಜಾತ್ರೆಗ ಬರುವ ಭಕ್ತರಿಗೆ ಉಚಿತವಾಗಿ ಮಜ್ಜಿಗೆಯನ್ನು ವಿತರಣೆ ಮಾಡಲಾ ಯಿತು.ಹೌದು ವೆಂಕಟೇಶ ಸಿದ್ದನಾಳ ಮತ್ತು ಚನ್ನಮ್ಮ ಸರ್ಕಲ್ ಸ್ನೇಹಿತರ ತಂಡ ಮಠಕ್ಕೆ ಹೊರಟಿ ರುವ ಭಕ್ತರಿಗೆ ಹಣ್ಣು ಮತ್ತು ಮಜ್ಜಿಗೆಯನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ನಗರದ ಚನ್ನಮ್ಮ ಸರ್ಕಲ್ ದಲ್ಲಿ ಮಠಕ್ಕೆ ಹೋಗುವ ಭಕ್ತರ ದಾಹ ತೀರಿಸುವ ಮಹೋನ್ನತ ಕಾರ್ಯಕ್ಕೆ ಉಪನಗರ ಠಾಣೆ ಇನ್ಸ್‌ಪೆಕ್ಟರ್ ರವಿಚಂದ್ರನ್, ಚಾಲನೆ ನೀಡಿದರು.

ವೆಂಕಟೇಶ ಸಿದ್ದನಾಥ, ಸಮೀರ್, ವಿಕ್ರಮ್, ಮಹೇಶ, ವಿಶ್ವನಾಥ, ವಿಜಯ, ಆಕಾಶ, ರೋಹಿತ್, ಮಂಜು, ಪ್ರದೀಪ ಸ್ನೇಹಿತರ ಬಳಗ ಸುಮಾರು ಎರಡು ಸಾವಿರಕ್ಕಿಂತ ಹೆಚ್ಚು ಭಕ್ತರಿಗೆ ಮಜ್ಜಿಗೆ ಮತ್ತು ಹಣ್ಣು ನೀಡಿ ಭಕ್ತರ ದಾಹ ತೀರಿಸಿದರು ಅಲ್ಲದೇ ಸಾರ್ವಜನಿಕರಿಂದಲೂ ಮೆಚ್ಚುಗೆಯನ್ನು ಇವರೆಲ್ಲರೂ ಪಡೆದುಕೊಂಡರು. ಬಿಸಿಲಿನಲ್ಲಿ ಬಂದವರಿಗೆ ಮಜ್ಜಿಗೆ ಇದರೊಂದಿಗೆ ಬಾಳೆಹಣ್ಣನ್ನು ನೀಡಿದ ಗೆಳೆಯರ ಬಳಗದ ಕಾರ್ಯ ಮೆಚ್ಚು ವಂತದ್ದು