ಧಾರವಾಡ –
ಖಾಸಗಿ ಬಸ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಯಾಗಿ ಸ್ಥಳದಲ್ಲೇ ಬಸ್ ಕ್ಲೀನರ್ ಸಾವಿಗೀಡಾಗಿದ ಘಟನೆ ಧಾರವಾಡ ಹೊರವಲಯದ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಯಲ್ಲಿ ನಡೆದಿದೆ.
ಓರ್ವನ ಸ್ಥಿತಿ ಗಂಭೀರವಾಗಿದ್ದು ಬಸ್ ಚಾಲಕನ ಜಾಣ್ಮೆ ಯಿಂದಾಗಿ ದೊಡ್ಡ ದೊಂದು ಅವಘಡ ತಪ್ಪಿದಂತಾಗಿದೆ
ಧಾರವಾಡ ಹೊರವಲಯದಲ್ಲಿನ ಕಿಲ್ಲರ್ ಹೆದ್ದಾರಿಯಲ್ಲಿ ಈ ಒಂದು ಅಪಘಾತ ಸಂಭವಿಸಿದೆ.ಹಳಿಯಾಳ ಬೈಪಾಸ್ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ
ರಾ. ಹೆ. 4 ರಲ್ಲಿ ಘಟನೆ ನಡೆದಿದ್ದು ಲಾರಿಯಲ್ಲಿಯೇ ಸಿಲುಕಿರೋ ಚಾಲಕನನ್ನು ಹೊರ ತೆಗೆಯಲು ಪೊಲೀಸರ ಹರಸಾಹಸವನ್ನು ಪಟ್ಟರು.ಇನ್ನೂ ಇತ್ತ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಗಾಯಾ ಳುಗಳು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದ್ದು ಇನ್ನೂ ಅಪಘಾತ ದ ಸುದ್ದಿ ತಿಳಿದ ಧಾರವಾಡ ಸಂಚಾರಿ ಮತ್ತು ಮತ್ತು ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
























