ಹುಬ್ಬಳ್ಳಿ-
ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಗದಗ ರಸ್ತೆಯಲ್ಲಿನ ಇಂಗಳ ಹಳ್ಳಿ ಕ್ರಾಸ್ ನಲ್ಲಿ ಈ ಒಂದು ಅಪಘಾತವಾಗಿದೆ.

ಹುಬ್ಬಳ್ಳಿಯಿಂದ ಗದಗ ಕಡೆಗೆ ಹೊರಟಿದ್ದ ಕಾರು ಗದಗ ನಿಂದ ಹುಬ್ಬಳ್ಳಿಯ ಕಡೆಗೆ ಬರುತ್ತಿದ್ದ ಮತ್ತೊಂದು ಕಾರು ನಡುವೆ ಈ ಒಂದು ರಸ್ತೆ ಅಪಘಾತ ಸಂಭವಿಸಿದೆ.

ಇಂಗಳ ಹಳ್ಳಿ ಕ್ರಾಸ್ ನಲ್ಲಿ ಕಾರನ್ನು ತಗೆದು ಕೊಳ್ಳುವಾಗ ಇನ್ನೊಂದು ಕಾರು ಬಂದು ಡಿಕ್ಕಿ ಯಾಗಿದೆ.ಘಟನೆ ಯಲ್ಲಿ ಎರಡು ಕಾರುಗಳ ಮುಂದಿನ ಮುಖಗಳು ಜಖಂ ಆಗಿವೆ.ಇನ್ನೂ ಚಾಲಕರಿಗೆ ಒಂದಿಷ್ಟು ಸಣ್ಣ ಪುಟ್ಟ ಗಾಯಗಳಾಗಿದ್ದು ವಿಷಯ ತಿಳಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆ ಸಿಬ್ಬಂದಿ ಚಿದಾನಂದ ಮಂಟೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎರಡು ಕಾರು ಗಳನ್ನು ಠಾಣೆಗೆ ತಗೆದುಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.