18 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಯೋಧನಿಗೆ ಹೃದಯಸ್ಪರ್ಶಿ ಸ್ವಾಗತ – ಗ್ರಾಮಕ್ಕೆ ಮಲ್ಲಿಕಾರ್ಜುನ ವನ್ನೂರ ರನ್ನು ಅದ್ದೂರಿಯಾಗಿ ಬರಮಾಡಿಕೊಂಡ ಚಡ್ಡಿ ದೋಸ್ತರು…..

Suddi Sante Desk

ಸವದತ್ತಿ

ಬರೋಬ್ಬರಿ 18 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿದ್ದುಕೊಂಡು ದೇಶದ ಸೇವೆ ಮಾಡಿ ತವರಿಗೆ ಯೋಧನನ್ನು ಅದ್ದೂರಿಯಾಗಿ ಗ್ರಾಮಕ್ಕೆ ಬರಮಾಡಿಕೊಳ್ಳಲಾಯಿತು.ಹೌದು ಮಲ್ಲಿಕಾರ್ಜುನ ಗದಿಗೆಪ್ಪ ವನ್ನೂರ ಎಂಬುವರು 2002 ರಲ್ಲಿ ಭಾರತೀಯ ಸೇನೆಗೆ ಸೇರಿಕೊಂಡಿದ್ದರು.

18 ವರ್ಷಗಳ ಕಾಲ ಯಶಶ್ವಿಯಾಗಿ ಭಾರತ ಮಾತೆಯ ಸೇವೆಯನ್ನು ಮಾಡಿ ಸಧ್ಯ ನಿವೃತ್ತಿ ಗೊಂಡು ಗ್ರಾಮಕ್ಕೆ ಬಂದ ಹಿನ್ನಲೆಯಲ್ಲಿ ಅದ್ದೂರಿ ಯಾಗಿ ಗ್ರಾಮಸ್ಥರು ಅದರಲ್ಲೂ ಬಾಲ್ಯದಲ್ಲಿ ಇವರೊಂದಿಗೆ ಬೆಳೆದ ಸಿಂಗಾರಕೊಪ್ಪ ಗ್ರಾಮಸ್ಥರು ಅದ್ದೂರಿಯಾಗಿ ಬರಮಾಡಿಕೊಂಡರು.

ದೇಶದ ಹರಿಯಾಣ,ಲೇಕ್,ಪಂಜಾಬ್ ಸೇರಿದಂತೆ ಹಲವು ಕಡೆಗಳಲ್ಲಿ ಸೇವೆಯನ್ನು ಮಾಡಿ ಸಧ್ಯ ತವರಿಗೆ ಮರಳಿದ್ದಾರೆ. ಸವದತ್ತಿ ತಾಲ್ಲೂಕಿನ ಸಿಂಗಾರಕೊಪ್ಪ ಗ್ರಾಮದವರಾದ ಇವರು ದೇಶ ಸೇವೆ ಮಾಡಿ ಊರಿಗೆ ಬರುತ್ತಿದ್ದಂತೆ ಇವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

ಹೌದು ಇಂಥಹದೊಂದು ಹೃದಯಸ್ಪರ್ಶಿಯಾದ ಕಾರ್ಯಕ್ರಮವೊಂದು ಗ್ರಾಮದಲ್ಲಿ ನಡೆಯಿತು. ಗ್ರಾಮಸ್ಥರು ಮತ್ತು ಚಡ್ಡಿ ದೋಸ್ತರ ಬಳದಿಂದ ಯೋಧ ನನ್ನು ಪ್ರೀತಿಯಿಂದ ಬರಮಾಡಿಕೊಳ್ಳಲಾ ಯಿತು ಗ್ರಾಮಕ್ಕೆ ಬರುತ್ತಿದ್ದಂತೆ ಅದ್ದೂರಿಯಾದ ಮೆರವಣಿಯ ಮೂಲಕ ಬರಮಾಡಿಕೊಂಡು ನಂತರ ಕಾರ್ಯಕ್ರಮವೊಂದನ್ನು ಮಾಡಿದ ಗ್ರಾಮಸ್ಥರು ಮತ್ತು ದೋಸ್ತರು ಸಾಧನೆ ಮತ್ತು ಸೇವೆಯನ್ನು ಬಣ್ಣಿಸಿದರು

ನಂತರ ಮಲ್ಲಿಕಾರ್ಜುನ ವನ್ನೂರ ಮತ್ತು ಇವರ ತಂದೆ ತಾಯಿಗಳಿಗೆ ಸನ್ಮಾನಿಸಿ ಗೌರವಿಸಿ ಅಭಿನಂದ ನೆಗಳನ್ನು ಸಲ್ಲಿಸಿದರು. ಇನ್ನೂ ಈ ಒಂದು ವಿಶೇಷ ವಾದ ಕಾರ್ಯಕ್ರಮದಲ್ಲಿ ಕಿರಣ ಗಾಣಿಗೇರ, ಮಹೇಶ ಹಿರೇಮಠ,ಮಹಾಂತೇಶ ಜೋಡಗೇರ,

ಪ್ರವೀಣ ಜೋಧರ,ಈರಣ್ಣಾ ಮಡಿವಾಳರ,ಶಿವಪ್ಪ ಬಿಕ್ಕನ್ನವರ,ಸಂತೋಷ ಅಳಗವಾಡಿ,ರಾಜು ಹಿರೆಕೇರಿ,ಸಂಗಪ್ಪ ಕಟ್ಟಿ, ಪ್ರವೀಣ ಕುಲಕರ್ಣಿ ಮಹಾಂತೇಶ ಸಂಗೋಳ್ಳಿ,ಅಜ್ಜಪ್ಪ ತೋರಗಲ್ಲ್, ಸರ್ವಿ ಪುಟಾಣಿಕರ,ಈರಣ್ಣಾ ಹಿತ್ತಲಮನಿ ಸೇರಿ ದಂತೆ ಗ್ರಾಮದ ಗುರು ಹಿರಿಯರು ಚಡ್ಡಿ ದೋಸ್ತರ ಬಳದವರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.