ಧಾರವಾಡ –
ಹೌದು ಪತ್ನಿಯನ್ನ ಕೊಂದು ತಾನು ಕೂಡಾ ನೇಣಿಗೆ ಶರಣಾದ ಘಟನೆ ಧಾರವಾಡದ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ನಡೆದಿದೆ. ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು ಪತ್ನಿಯ ಶೀಲಶಂಕಿಸಿ ಹತ್ಯೆಯಾಗಿರಬಹುದು ಎನ್ನುವ ಶಂಕೆಯನ್ನು ವ್ಯಕ್ತಪಡಿಸಲಾಗಿದೆ.
ಶ್ರೀದೇವಿ ಹತ್ಯೆಯಾದ ಮಹಿಳೆಯಾಗಿದ್ದು ರಾಜು ರಾಮಾಪುರ ಹತ್ಯೆಗೈದು ನೇಣಿಗೆ ಶರಣಾಗಿದ್ದಾನೆ ಇನ್ನೂ ಪತ್ನಿಯ ಶೀಲ ಶಂಕಿಸುತ್ತಿದ್ದ ಪತಿ ರಾಜು. ಈ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ.ಹತ್ಯೆ ಬಳಿಕ ತಾನು ಅವಳ ಪಕ್ಕದಲ್ಲಿಯೇ ಮರಕ್ಕೆ ನೇಣಿಗೆ ಶರಣಾಗಿ ದ್ದಾನೆ.
ಇನ್ನೂ ಈ ಒಂದು ಸುದ್ದಿ ತಿಳಿದ ಧಾರವಾಡ ಗ್ರಾಮೀಣ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿ ಈ ಕುರಿತಂತೆ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.