ಧಾರವಾಡ –
ಧಾರವಾಡ ಜೈಲಿನಲ್ಲಿ ಮಾರಾಮಾರಿ – ಜೈಲು ಸಿಬ್ಬಂದಿ ಕೈದಿಗಳ ನಡುವೆ ಹೊಡೆದಾಟ ಆಸ್ಪತ್ರೆ ಸೇರಿದ ಇಬ್ಬರು ಜೈಲಿನಲ್ಲಿ ಕೈದಿಗಳು ಮತ್ತು ಸಿಬ್ಬಂದಿಗಳ ನಡುವೆ ಹೊಡೆದಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.ಹೌದು ಕೈದಿ ಮತ್ತು ಜೈಲು ಸಿಬ್ಬಂದಿ ಮಧ್ಯೆ ಈ ಒಂದು ಹೊಡೆದಾಟ ನಡೆದಿದೆ.
ಜೈಲು ಸಿಬ್ಬಂದಿ ಮತ್ತು ಕೈದಿ ಇಬ್ಬರಿಗೂ ತೀವ್ರವಾದ ಗಾಯಗಳಾಗಿದ್ದು ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಈ ಒಂದು ಹೊಡೆದಾಟ ನಡೆದಿದ್ದು ಇಬ್ಬರೂ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು ಮೋಹನ ಸಿದ್ದಪ್ಪ ಬಡಿಗೇರ, ಗಾಯಗೊಂಡ ಜೈಲು ಸಿಬ್ಬಂದಿಗಳಾಗಿದ್ದಾರೆ.
ಪ್ರಶಾಂತ ಅಲಿಯಾಸ್ ಪಾಚು, ಹಲ್ಲೆ ಮಾಡಿದ ಕೈದಿಯಾಗಿದ್ದು ಅನೇಕ ದಿನಗಳಿಂದ ಧಾರವಾಡ ಕಾರಾಗೃಹದಲ್ಲಿದ್ದ ಪ್ರಶಾಂತ.ಬಾಚಣಿಕೆಯನ್ನೇ ಚಾಕೂವಿನಂತೆ ಮಾಡಿ ಹೊಡೆದಿರೋ ಸಾಧ್ಯತೆ ಕಂಡು ಬಂದಿದ್ದು ಧಾರವಾಡ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇನ್ನೂ ಈ ಒಂದು ಸುದ್ದಿಯನ್ನು ತಿಳಿದ ಉಪನಗರ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿದ್ದು ಇತ್ತ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..