ಬೆಳಗಾವಿ –
ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಇವರ ಶಾಲೆಯಲ್ಲಿ ಅದ್ದೂರಿ ಬೀಳ್ಕೊಡುಗೆ ಸಮಾರಂಭ ನಡೆಯಿತು.ಹೌದು ಸರ್ಕಾರಿ ಪ್ರೌಢಶಾಲೆ ಸವದಿ ತಾಲ್ಲೂಕು ಅಥಣಿ ಜಿಲ್ಲಾ ಬೆಳಗಾವಿ ಇಲ್ಲಿ ಇಂದು ನಡೆದ SSLC ಮಕ್ಕಳ ಬೀಳ್ಕೊಡುಗೆ ಸಮಾರಂಭ ಅದ್ದೂರಿಯಾಗಿ ಅವಿಸ್ಮರಣೀಯವಾದಂಥ ಕಾರ್ಯಕ್ರಮ ಜರುಗಿತು.

ಬೆಳಿಗ್ಗೆ 8 ಮತ್ತು 9 ತರಗತಿ ವಿದ್ಯಾರ್ಥಿಗಳಿಂದ ಉಪಾಹಾರ ವ್ಯವಸ್ಥೆ ಮಾಡಿದರು ನಂತರ ದೀಪದಾನ ಕಾರ್ಯಕ್ರಮ ಸರಸ್ವತಿ ಪೂಜೆ ಅದ್ಧೂರಿಯಾಗಿ ಜರುಗಿತು ಮಕ್ಕಳು ದೇಶದ ಏಕತೆ ಭಾವೈಕ್ಯತೆಯ ಪ್ರತಿಜ್ಞಾವಿಧಿ ಸ್ವೀಕರಿಸಿ ದೀಪಗಳಿಂದ ಭಾರತದ ನಕ್ಷೆಯನ್ನು ಕ್ಯಾಂಡಲ್ ಬೆಳಗುವ ಮುಖಾಂತರ ದೀಪದಾನ ಕಾರ್ಯಕ್ರಮ ಮಾಡಿದರು ಇದನ್ನು ಅಚ್ಚುಕಟ್ಟಾಗಿ ಶ್ರೀಮತಿ ವಾಲೀಕಾರ್ ಅವರು ನೆರವೇರಿಸಿಕೊಟ್ಟರು ಎಸ್ ಡಿಎಂಸಿ ಅಧ್ಯಕ್ಷರು ಶಿಕ್ಷಕರಿಂದ ಸರಸ್ವತಿ ಪೂಜೆ ನೆರವೇರಿತು ತದನಂತರ ಮಠದಿಂದ ಬಂದಂಥ ಬಿಸಿಯೂಟ ಪಲಾವ್ ಮೈಸೂರ್ ಪಾಕ್ ವಿದ್ಯಾರ್ಥಿಗಳಿಗೆ ನೀಡಿ ಭೋಜನದ ವ್ಯವಸ್ಥೆ ಮಾಡಿದ್ದರು
ನಂತರ ಕಾರ್ಯಕ್ರಮ ಪ್ರಾರಂಭವಾಯಿತು


ಮುಖ್ಯ ಅತಿಥಿಯಾಗಿ ಗುರುಮಾತೆ ದೊಡ್ಮನಿ ಮೇಡಮ್ ಶಿಸ್ತು ಸಹನೆ ಸಾಧನೆ ಗುರಿ ಹೀಗೆ ಹಲವಾರು ವಿಷಯ ಗಳನ್ನು ಮಕ್ಕಳಿಗೆ ತಮ್ಮ ಹಿತ ನುಡಿಗಳನ್ನು ಹೇಳಿದರು ಬಸ್ ಡಿಪೋ ಮೇನೇಜರ್ ಎನ್ ಎಂ ಕೆರಿ ಅವರು ಊರಿನ ಗಣ್ಯಾತಿಗಣ್ಯರು ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ಹೆಚ್ಚಿಸಿದ್ದರು ಶಿಕ್ಷಕರು ತಮ್ಮ ಅನಿಸಿಕೆಗಳನ್ನು ಹೇಳುವಾಗ ಮಕ್ಕಳೆಲ್ಲ ಕಣ್ಣೀರ ಧಾರೆ ಹರಿಯಿತು ಮಕ್ಕಳಿಗೆ ಬಹುಮಾನ ವಿತರಣೆ ಮಕ್ಕಳಿಂದ ಶಾಲೆಗೆ ಪ್ರಿಂಟರ್ ಕಾಣಿಕೆ ನೀಡಿದ್ದು ವಿಶೇಷ ವಾಗಿತ್ತು


ಇದೇ ಸಂದರ್ಭದಲ್ಲಿ ಮೈತ್ರಿ ಪ್ರಭಾರಿ ಮುಖ್ಯ ಗುರುಗಳು ತುಗಶೆಟ್ಟಿ ಶಿಕ್ಷಕರು ತುಪ್ಪದ ಶಿಕ್ಷಕರು ರಾಜ್ಯಾಧ್ಯಕ್ಷ ಹಾಗೂ ಶಿಕ್ಷಕ ಪವಾಡೆಪ್ಪ ತಮ್ಮ ಜೀವನದ ಏರಿಳಿತಗಳ ಬಗ್ಗೆ ಮಕ್ಕಳ ಯಾವ ರೀತಿ ಸಾಧನೆ ಮಾಡಬೇಕು ಯಾವ ರೀತಿ ಯಾಗಿ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಬೇಕು ಅನ್ನೋದರ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು