ಬೆಳಗಾವಿ –
ಕಲಿಕಾ ಚೇತರಿಕೆ ಕಾರ್ಯಕ್ರಮವು ರಾಜ್ಯಾದ್ಯಂತ ಇಂದಿನಿಂದ ಆರಂಭಗೊಂಡಿದ್ದು ಬೆಳಗಾವಿಯ ನ್ಯೂ ಇಂಗ್ಲಿಷ್ ಪ್ರೌಢ ಶಾಲೆ ಮುತಗಾ ಇಲ್ಲಿ ಬೆಳಗಾವಿ ಗ್ರಾಮೀಣ ವಲಯದ ಶಿಕ್ಷಕರಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು. ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್ ಪಿ ಜುಟ್ಟನ ವರ ಉದ್ಘಾಟಿಸಿದರು.

ಸದರಿ ಕಾರ್ಯಕ್ರಮದಲ್ಲಿ ಗ್ರಾಮೀಣ ವಲಯದ ಕ್ಷೇತ್ರ ಸಮನ್ವಯಧಿಕಾರಿಗಳಾದ ಎಂ ಎಸ್ ಮೇದಾರ ಡಯಟ್ ನ ಉಪನ್ಯಾಸಕರಾದ ಆರ್ ಪಿ ಪಾಟೀಲ, ಶ್ರೀಮತಿ ಬಾಳೇಕುಂದರಗಿ ಉಪಸ್ಥಿತರಿದ್ದರು. ಜಯಕು ಮಾರ ಹೆಬಳಿ KSPSTA ಜಿಲ್ಲಾ ಅಧ್ಯಕ್ಷರು,ತಾಲೂಕ ಅಧ್ಯಕ್ಷರಾದ ಪ್ರಕಾಶ್ ದೆಯಣ್ಣವರ ಜಿಲ್ಲಾ ಖಜಾಂಚಿ ಗಳಾದ ವೈ ಬಿ ಪೂಜೇರ,ತಾಲೂಕ ಕಾರ್ಯದರ್ಶಿಗಳಾದ ಮೈಲಾರ ಹೊರಕೇರಿ,ಸಂಘದ ಪದಾಧಿಕಾರಿಗಳಾದ ರುದ್ರೇಶ್ ಬಡಿಗೇರ,ವೈ ಅರ್ ನಾಯಕ,ಸಂಜು ಕೋಲಕಾರ,ಎ ಡಿ ಮಲ್ಲನ್ನವರ,ಶ್ರೀಮತಿ ಎಸ್ ಎಂ ಬಂದಕ್ಕನವರ, ಶ್ರೀಮತಿ ಆರ್ ಎಚ್ ವಾಘಮೋರೆ , ಶಿಕ್ಷಣ ಸಂಯೋಜಕರು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಸಮೂಹ ಸಂಪನ್ಮೂಲ ವ್ಯಕ್ತಿಗಳು, ಪ್ರಧಾನ ಗುರುಗಳು, ಸಹ ಶಿಕ್ಷಕರು ಉಪಸ್ಥಿತರಿದ್ದರು






















