ಹುಬ್ಬಳ್ಳಿ –
ಹೊರಟಿದ್ದ ಬೈಕ್ ಗೆ ಲಾರಿಯೊಂದು ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಲದಲ್ಲೇ ಸಾವಿಗೀಡಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಬಿವ್ಹಿಬಿ ಕಾಲೇಜಿನ ಮುಂದೆ ಈ ಒಂದು ಭೀಕರ ಅಪಘಾತ ನಡೆದಿದೆ. ಎಪಿಎಮ್ ಸಿ ಯಲ್ಲಿ ತರಕಾರಿ ದಲ್ಲಾಳಿಗಳಾಗಿ ಕೆಲಸವನ್ನು ಮಾಡುತ್ತಿದ್ದ ರಾಜೇಸಾ ಬ್ ಮತ್ತು ಅಲ್ಲಾಭಕ್ಷ್ ಮೃತ ದುರ್ದೈವಿಗಳಾಗಿದ್ದಾರೆ. ಎಪಿಎಮ್ ಸಿ ಯಲ್ಲಿ ಎಂದಿನಂತೆ ಕೆಲಸವನ್ನು ಮುಗಿಸಿಕೊಂಡು ಮನೆಗೆ ಹೊರಟಿದ್ದರು.

ನಗರದ ಯಲ್ಲಾಪೂರ ಬಡಾವಣೆಯ ನಿವಾಸಿಗಳಾ ಗಿದ್ದು ಮನೆಗೆ ಹೊರಟಿದ್ದ ಸಮಯದಲ್ಲಿ ನಗರದ ಬಿವ್ಹಿಬಿ ಕಾಲೇಜಿನ ಮುಂದೆ ಬೈಕ್ ಮೇಲೆ ಹೊರಟಿ ದ್ದ ಸಮಯದಲ್ಲಿ ಹಿಂದಿನಿಂದ ಬಂದ ಲಾರಿ ಬೈಕ್ ಗೆ ಡಿಕ್ಕಿಯಾಗಿದೆ ಬೈಕ್ ನಲ್ಲಿದ್ದ ಇಬ್ಬರು ಬೈಕ್ ಸವಾರ ರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಇನ್ನೂ ವಿಷಯ ತಿಳಿದ ಉತ್ತರ ಸಂಚಾರಿ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ವನ್ನು ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.