ಧಾರವಾಡ –
ಮೊನ್ನೆ ಮೊನ್ನೆ ಅಷ್ಟೇ ಹದಿಮೂರು ಜನರನ್ನು ಬಲಿ ತಗೆದುಕೊಂಡ ಧಾರವಾಡ ಹೊರವಲಯದ ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ದೊಡ್ಡ ಪ್ರಮಾಣದ ದುರಂತ ತಪ್ಪಿದೆ.ಪಟಾಕಿ ತುಂಬಿಕೊಂಡು ಹೊರಟಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿಯಾಗಿದೆ.

ಹೌದು ದೊಡ್ಡ ದುರಂತ ಮಾಸುವ ಮುನ್ನವೇ ಇಂದು ಇದೇ ಸ್ಥಳದಲ್ಲಿ ಮತ್ತೊಂದು ಅವಘಡ ತಪ್ಪಿದಂತಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಪಟಾಕಿ ತುಂಬಿದ್ದ ಲಾರಿಗೆ ಲಾರಿಯೊಂದು ಡಿಕ್ಕಿಯಾಗಿದೆ.ಆದರೆ ಯಾವುದೇ ರೀತಿಯ ಅವಘಡ ಸಂಭವಿಸಿಲ್ಲ.

ಪಟಾಕಿ ತುಂಬಿಕೊಂಡು ಹೊರಟಿದ್ದ ಲಾರಿಯೊಂದಕ್ಕೆ ಮತ್ತೊಂದು ಲಾರಿ ಡಿಕ್ಕಿಯಾಗಿದೆ. ಧಾರವಾಡದ ಹೊರವಲಯದಲ್ಲಿ ಹೆದ್ದಾರಿಯ ಇಟಿಗಟ್ಟಿ ಕ್ರಾಸ್ ನಲ್ಲಿ ಈ ಒಂದು ಅವಘಡ ನಡೆದಿದೆ.

ಸಾಕಷ್ಟು ಪ್ರಮಾಣದಲ್ಲಿ ಪಟಾಕಿಯನ್ನು ತುಂಬಿಕೊಂಡು ಲಾರಿ ಹೊರಟಿತ್ತು ಎದುರಿಗೆ ಬಂದ ಲಾರಿ ಪಟಾಕಿ ತುಂಬಿಕೊಂಡು ಹೊರಟಿದ್ದ ಲಾರಿ ಡಿಕ್ಕಿಯಾಗುವ ಬದಲಿಗೆ ಸ್ವಲ್ಪುದರಲ್ಲಿಯೇ ತಪ್ಪಿ ಲಾರಿಯ ಪಕ್ಕಕ್ಕೆ ಡಿಕ್ಕಿಯಾಗಿದೆ,ಸ್ವಲ್ಪದರಲ್ಲಿಯೇ ದೊಡ್ಡ ಪ್ರಮಾಣದಲ್ಲಿನ ಅವಘಡವೊಂದು ತಪ್ಪಿದಂತಾಗಿದ್ದು.

ಇನ್ನೂ ಪಟಾಕಿಯನ್ನು ತುಂಬಿಕೊಂಡು ಹೊರಟಿದ್ದ ಲಾರಿಗೆ ಲಾರಿ ಏನಾದರೂ ಡಿಕ್ಕಿಯಾಗಿದ್ದರೆ ಬೆಂಕಿ ಹತ್ತಿಕೊಂಡು ಸ್ಫೋಟ ಆಗುವ ಲಕ್ಷ್ಮಣಗಳಿದ್ದವು. ಆದರೆ ದೊಡ್ಡ ಪ್ರಮಾಣದ ಅನಾಹುತ ತಪ್ಪಿದಂತಾಗಿದೆ. ಇನ್ನೂ ಸುದ್ದಿ ತಿಳಿದ ಧಾರವಾಡ ಗ್ರಾಮೀಣ ಇನ್ಸ್ಪೆಕ್ಟರ್ ಶ್ರೀಧರ್ ಸತಾರೆ ಮತ್ತು ಸಿಬ್ಬಂದಿ ಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಗಳು ಹಾಜರಾಗಿದ್ದಾರೆ.