ದಾವಣಗೇರಿ –
ಲಾರಿ ಹಾಯ್ದು ಬುಲೆಟ್ ಸವಾರ ಸ್ಥಳದಲ್ಲೆ ಸಾವಿಗೀಡಾದ ಘಟನೆ ದಾವಣಗೇರಿಯಲ್ಲಿ ನಡೆದಿದೆ. ದಾವಣಗೇರಿಯ ಉಚ್ಚಂಗಿದುರ್ಗದ ಹಳ್ಳಿನಗದ್ದೆ ಕ್ರಾಸ್ ನಲ್ಲಿ ಈ ಒಂದು ದುರ್ಘಟನೆ ನಡೆದಿದೆ.

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿ ತಲೆಯ ಮೇಲೆಯೇ ಹರಿದಿರುವ ಲಾರಿಯಿಂದಾಗಿ ಸವಾರನ ತಲೆಯ ಭಾಗ ಛಿದ್ರವಾಗಿದೆ.ಉಚ್ಚಂಗಿದುರ್ಗದಿಂದ ದಾವಣಗೆರೆ ಕಡೆಗೆ ಬರುತ್ತಿದ್ದ ಲಾರಿ.ದಾವಣಗೆರೆ ಕಡೆಯಿಂದ ಉಚ್ಚಂಗಿದುರ್ಗ ಕಡೆಗೆ ತೆರಳುತ್ತಿದ್ದ ಬುಲೆಟ್ ಸವಾರ್

ಮೃತ ವ್ಯಕ್ತಿಯ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ ದಾವಣಗೆರೆಯ ವಿನೋಭ ನಗರದ ಮುಸ್ಲಿಂ ವ್ಯಕ್ತಿ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. KA 03 JJ 3366 ನಂಬರ್ ನ ಬುಲೆಟ್ ನಲ್ಲಿ ತೆರಳುತ್ತಿದ್ದ ಮೃತ ವ್ಯಕ್ತಿ.ಅರಸಿಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಸ್ಥಳಕ್ಕೆ ಅರಸಿಕೆರೆ ಪೊಲೀಸರ ಭೇಟಿ ಪರಿಶೀಲನೆ.