ಹುಬ್ಬಳ್ಳಿ –
ಹುಬ್ಬಳ್ಳಿಯ ಪೆಟ್ರೋಲ್ ಬಂಕ್ ವೊಂದರಲ್ಲಿ ಧಗಧಗನೇ ಓಮಿನಿ ಕಾರೊಂದು ಹೊತ್ತಿ ಉರಿದಿದೆ. ಹೌದು ಪೆಟ್ರೊಲ್ ಹಾಕಿಸಿಕೊಂಡ ಮಾರುತಿ ಓಮಿನಿ ವ್ಯಾನ್ ನಂತರ ನೋಡು ನೋಡುತ್ತಲೆ ಹೊತ್ತಿ ಉರಿ ಯಿತು.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ತಪ್ಪಿದೆ ಬಾರೀ ಅನಾ ಹುತವೊಂದು.ಪೆಟ್ರೋಲ್ ಹಾಕುವ ಸಂದರ್ಭ ದಲ್ಲಿ ವ್ಯಾನ್ ನ ಇಂಜಿನ್ ನಲ್ಲಿ ಹೊತ್ತಿಕೊಂಡ ಬೆಂಕಿ ನಂತ ರ ಜೋರಾಯಿತು.ಪೆಟ್ರೋಲ್ ಹಾಕಿಸಿ ಚಾಲಕ ವಾಹನ ಸ್ಟಾರ್ಟ್ ಮಾಡುತ್ತಿದ್ದಂತೆಯೇ ಹೊತ್ತಿಕೊಂ ಡ ಬೆಂಕಿಯಿಂದ ಈ ಒಂದು ಅವಘಡ ನಡೆಯಿತು

ಅರ್ಧ ಗಂಟೆಗೂ ಅಧಿಕ ಕಾಲ ಹೊತ್ತಿ ಉರಿದಿದೆ ಈ ಓಮಿನಿ ವ್ಯಾನ್.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಈ ಒಂದು ಘಟನೆ ಯಲ್ಲಿ.

ಕೂಡಲೇ ಸ್ಥಳಕ್ಕಾಗಮಿಸಿ ಹೊತ್ತಿಕೊಂಡ ಬೆಂಕಿ ಯನ್ನು ನಂದಿಸಿದರು ಅಗ್ನಿಯ ಶಾಮಕ ದಳದ ಸಿಬ್ಬಂದಿಗಳು.

ಇನ್ನೂ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಕಂಡು ಬಂದಿತು.ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರೇ ಇರುವ ಪೆಟ್ರೋಲ್ ಬಂಕ್ ನಲ್ಲಿ ಈ ಒಂದು ಅವಘಡ ನಡೆದಿದೆ.