ಧಾರವಾಡ –

ಶಿಕ್ಷಕರ ಸಂಘಗಳ ತವರೂರು ಧಾರವಾಡ ನಗರ ದಲ್ಲಿ ರಾಜ್ಯದ ಬಲಾಢ್ಯ ಬಲಿಷ್ಠ ಶಿಕ್ಷಕರ ಸಂಘ ಗಳಾದ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಪದವೀ ಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರಾಜ್ಯ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘ, ಉರ್ದು ಶಿಕ್ಷಕರ ಸಂಘ ಸೇರಿದಂತೆ ಅನೇಕ ಶಿಕ್ಷಕರ ಸಂಘಗಳು ಸೇರಿ ಧಾರವಾಡದ ಮುತ್ಸದ್ದಿ ಶಿಕ್ಷಕರ ನಾಯಕರಾದ ಗುರು ತಿಗಡಿ ಅವರ ನೇತ್ರತ್ವದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಸಂಘಗಳ ಪರಿಷತ್ತು ರಚನೆಯಾಗಿದೆ.

ಶಿಕ್ಷಕರ ಬೇಕು, ಬೇಡಿಕೆಗಳನ್ನು ಇಡೇರಿಸುವ ಸಲುವಾಗಿ ಬಲಾಢ್ಯ ಶಿಕ್ಷಕರ ರಾಜ್ಯ ಮಟ್ಟದ ಶಿಕ್ಷಕರ ಸಂಘಗಳು ಸೇರಿಕೊಂಡು ಸರಕಾರದ ನ ಸೆಳೆಯಲು ಶಿಕ್ಷಕರ ನೋವು ನಲಿವುಗಳಿಗೆ ಸ್ಪಂದಿಸುವ ಉದ್ದೇಶ ದಿಂದ ರಾಜ್ಯದ ಬಹುತೇಕ ಶಿಕ್ಷಕರ ಸಂಘಗಳ ನಾಯಕರು ಸೇರಿಕೊಂಡು ಈ ಪರಿಷತ್ತನ್ನು ರಚಿಸಲಾಗಿದೆ.

ಈ ಪರಿಷತ್ತಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆ ಕಾಲೇಜು ಶಿಕ್ಷಕರು ಸಹ ಸದಸ್ಯತ್ವವನ್ನು ಪಡೆದು ಶಿಕ್ಷಕರ ಸೇವೆ ಮಾಡಲು ಮುಕ್ತ ಅವಕಾಶ ಇದೆ ಎಂದು ರಾಜ್ಯಾದ್ಯಕ್ಷ ಗುರು ತಿಗಡಿ ಪ್ರದಾನ ಕಾರ್ಯದರ್ಶಿ ಅಶೋಕ ಸಜ್ಜನ, ಪವಾಡೆಪ್ಪ, ಎಸ್ ವಾಯ್ ಸೊರಟಿ, ಶಮಶಾದಖಾನ, ಎಸ್ ಎಫ್ ಪಾಟೀಲ ಸಂಗಮೇಶ ಖನ್ನಿನಾಯ್ಕರ ಆರ್ ನಾರಾಯಣಸ್ವಾಮಿ ಚಿಂತಾಮಣಿ, ಕೆ ಬಿ ಕುರಹಟ್ಟಿ ಪಿ ಎಸ್ ಅಂಕಲಿ ಅನ್ನಪೂರ್ಣ ಅಸ್ಕಿ, ಕುಡುಸೋಮಣ್ಣನವರ, ಮಲ್ಲಿಕಾರ್ಜುನ ಉಪ್ಪಿನ ಪ್ರೇಮಾವತಿ ಶಂಕರ ಘಟ್ಟಿ, ಕೆ ನಾಗರಾಜ ಎಂ ವಿವಕುಸುಮಾ ಹಂಡಿ ಎಂ ಡಿ ರಪೀಕ ಇನ್ನೂ ಅನೇಕ ಘಟಾನುಘಟಿ ನಾಯಕರು ಈ ಪರಿಷತ್ತಿನಲ್ಲಿ ಪ್ರಮುಖ ಹುದ್ದೆಗಳಲ್ಲಿ ಇದ್ದು ಮುಂದಿನ ದಿನಗಳಲ್ಲಿ ಈ ಪರಿಷತ್ತು ಶಿಕ್ಷಕರ ವರ್ಗಾವಣೆ ಸೇರಿದಂತೆ ಶಿಕ್ಷಕರ ಪ್ರಮುಖ ಸಮಸ್ಯೆಗಳನ್ನು ಈಡೇರಿಸಲು ಪ್ರಯತ್ನ ಮಾಡಲಿದೆ ಎಂದು ರಾಜ್ಯಾದ್ಯಕ್ಷರಾದ ಗುರು ತಿಗಡಿ ತಿಳಿಸಿದರು
