ಬದಾಮಿ –
ಹೆಸರಾಂತ ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ನೆನಪಿನಲ್ಲಿ ಸಂಗೀತ ಸ್ವರ ನಮನ ಕಾರ್ಯಕ್ರಮ ನಡೆಯಿತು. ಬಾದಾಮಿಯ ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ಅಭಿಲಾಷ ಸಿನಿ ಕ್ರಿಯೇಷನ್ಸ್ ಹಾಗೂ ಅಭಿಲಾಷ ಮೆಲೋಡಿಸ್ ಬಾದಾಮಿ ಇವರು ಆಯೋಜಿಸಿದ್ದ ಎಸ್.ಪಿ.ಬಿ ಸ್ಮರಣಾರ್ಥ ಸಂಗೀತ ಸ್ವರ ನಮನ ಕಾರ್ಯಕ್ರಮ ಜರುಗಿತು.
ಗಾನ ಗಂಧರ್ವ ಎಸ್.ಪಿ.ಬಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ನಿವೃತ್ತ ಬ್ಯಾಂಕ ಅಧಿಕಾರಿ ಹಾಗೂ ವಕೀಲರಾದ ಡಿ.ಬಿ ಬೆಳ್ಳಿಗುಂಡಿ ಮಾತನಾಡಿ ಸಂಗೀತ ಲೋಕದಲ್ಲಿ ಸಾವಿರಾರು ಹಾಡುಗಳನ್ನು ವಿವಿಧ ಭಾಷೆಯಲ್ಲಿ ಹಾಡಿ ಮೈಲುಗಲ್ಲು ಸ್ಥಾಪಿಸಿದ ಎಸ್.ಪಿ.ಬಿ ಅವರ ಸ್ಮರಣಾರ್ಥವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಎಂದರು.
ಪತ್ರಕರ್ತ ಬಸವರಾಜ್ ಉಳ್ಳಾಗಡ್ಡಿ ಮಾತನಾಡಿ ಈ ಕಾರ್ಯಕ್ರಮದ ರುವಾರಿ ಮಂಜುನಾಥ ವಡ್ಡರ ಬಹುಮುಖ ಪ್ರತಿಭೆಯಾಗಿದ್ದು ಸಂಗೀತ ಮಾಂತ್ತಿಕ ಎಸ್.ಪಿ.ಬಿ ಅವರ ನೆನಪಿಗಾಗಿ ಹಮ್ಮಿಕೊಂಡ ಕಾರ್ಯಕ್ರಮ ಅರ್ಥಪೂರ್ಣ ಹಾಗೇ ವಿವಿಧ ಭಾಗಗಳಿಂದ ಸಂಗೀತ ಕಲಾವಿದರನ್ನು ಕರೆಸಿ ಬಾದಾಮಿ ಜನತೆಗೆ ಸಂಗೀತದ ಸುಧೆ ಉಣಬಡಿಸಿದ ಇವರ ಕಾರ್ಯ ಶ್ಲಾಘನೀಯ ಎಂದರು.
ಸಮಾಜ ಸೇವಕ ಕಡ್ಲಿಮಟ್ಟಿ, ಭೀಮಸಿ ನೀಲಗುಂದ, ಮಂಜು ವಡ್ಡರ, ನಾಗಪ್ಪ ದೊಡಮನಿ ಇದ್ದರು.ವೇದಿಕೆಯ ಕಾರ್ಯಕ್ರಮದ ನಂತರ ವಿವಿದ ಕಲಾವಿದರಿಂದ ಎಸ್ ಪಿಬಿ ಅವರ ಹಾಡುಗಳ ನಿನಾದ ಕೇಳಿ ಬಂದವು.ಈ ಮೂಲಕ ಹಿರಿಯ ಗಾಯಕನನ್ನು ನೆನೆದು ಸ್ವರ ನಮನವನ್ನು ಸಲ್ಲಿಸಲಾಯಿತು.