ಹುಬ್ಬಳ್ಳಿ ಧಾರವಾಡ –
ಚೆಂದ ಇದ್ದ ರೋಡ್ ತೆಗ್ಗು ತಗೆದ್ರು ಹಾಳ್ ಮಾಡಿ ಹೋದ್ರು – ಹುಬ್ಬಳ್ಳಿ ಧಾರವಾಡದಲ್ಲಿ ಹೊಸದೊಂದು ದೊಡ್ಡ ತಲೆನೋವು ಸಮಸ್ಯೆ…..ಕಾರ್ಪೋರೇಟರ್ ಕೂಡಾ ಬೇಸತ್ತಿದ್ದಾರೆ ಕಣ್ಮಚ್ಚಿ ಪಾಲಿಕೆಯವರು
ರಾಜ್ಯದ ಎರಡನೇಯ ದೊಡ್ಡ ಮಹಾನಗರ ಪಾಲಿಕೆ ಎಂದೆ ಕರೆಯುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಯಾರೇ ಏನೇ ಮಾಡಿದ್ರು ನಡೆಯುತ್ತದೆ ಎಂಬೊದಕ್ಕೆ ಸಧ್ಯ ಅವಳಿ ನಗರದಲ್ಲಿ ಬೇಕಾಬಿಟ್ಟಿ ಯಾಗಿ ತಗೆಯುತ್ತಿರುವ ತೆಗ್ಗುಗಳೇ ಸಾಕ್ಷಿ.
ಹೌದು ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಅವಳಿ ನಗರದ ತುಂಬೆಲ್ಲಾ ಅಂದ ಚೆಂದವಾಗಿದ್ದ ರಸ್ತೆಗಳನ್ನು 24*7 ನೀರು ಯೋಜನೆ ನೆಪದಲ್ಲಿ ತೆಗ್ಗು ಗಳನ್ನು ತಗೆಯಲಾಗುತ್ತಿದೆ.ಸಾಮಾನ್ಯವಾಗಿ ಯಾವುದೇ ಒಂದು ಯೋಜನೆ ಮಾಡುವ ಮುಂಚಿತವಾಗಿ ಪ್ಲಾನ್ ಮಾಡಲಾಗುತ್ತಿದೆ ಆದರೆ ಹುಬ್ಬಳ್ಳಿ ಧಾರವಾಡದಲ್ಲಿನ ಯಾವುದೇ ಯೋಜನೆಗೂ ಯಾವುದೇ ಕಾಮಗಾರಿಗೂ ಸಂಬಂಧವಿಲ್ಲದಂತೆ ಕಾಣುತ್ತಿದೆ
ಅಧಿಕಾರಿಗಳ ಸಮನ್ವಯ ಕೊರತೆಯಿಂದಾಗಿ ಸಧ್ಯ ಹುಬ್ಬಳ್ಳಿ ಧಾರವಾಡದಲ್ಲಿ ಯಾವುದೇ ಯೋಜನೆಗೂ ಯಾವುದೇ ಕಾಮಗಾರಿಗೂ ಸಂಬಂಧವಿಲ್ಲದಂತೆ ಮಾಡಲಾಗುತ್ತಿದೆ ಎಂಬೊದು ಈ ಒಂದು ಚಿತ್ರಣದಿಂದ ಕಂಡು ಬರುತ್ತಿದ್ದು ಇತ್ತೀಚಿಗಷ್ಟೇ ಮಾಡಲಾಗಿರುವ ಅವಳಿ ನಗರದಲ್ಲಿನ ರಸ್ತೆಗಳನ್ನು ಮತ್ತೆ ಅಗೆಯಲಾಗು ತ್ತಿದ್ದು ಸುಂದರವಾಗಿದ್ದ ಅವಳಿ ನಗರದ ಚಿತ್ರಣವನ್ನು ನಿರಂತರ ನೀರು ಸರಬರಾಜು ಯೋಜನೆ ಕಾಮಗಾರಿ ಹಾಳು ಮಾಡಿದ್ದು
ಚೆಂದವಾಗಿದ್ದ ರಸ್ತೆಗಳನ್ನು ಬೇಕಾಬಿಟ್ಟಿಯಾಗಿ ಅಗೆದು ಪೈಪ್ ಹಾಕಿ ಬೇಕಾಬಿಟ್ಟಿಯಾಗಿ ಮಣ್ಣು ಹಾಕಿ ಹೋಗು ತ್ತಿದ್ದಾರೆ ಹೀಗಾಗಿ ರಸ್ತೆಗಳು ಹಾಳಾಗಿದ್ದು ಈ ಒಂದು ವಿಚಾರದಿಂದ ಅವಳಿ ನಗರದ ಸೌಂದರ್ಯ ಹಾಳಾಗಿದ್ದು ಪಾಲಿಕೆಯ ಸದಸ್ಯರಿಗೂ ಇದು ದೊಡ್ಡ ಕಿರಿಕಿರಿಯಾ ಗಿದ್ದು ಇತ್ತ ಈ ಒಂದು ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಬೇಕಾದ ಪಾಲಿಕೆಯ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ನೋಡಿ ನೋಡಲಾರದಂತೆ ಇದ್ದಾರೆ ಹೇಳೊರಿಲ್ಲ ಕೇಳೊರಿಲ್ಲ ಎಂಬಂತಾಗಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ……