ಬೆಂಗಳೂರು–
ಶಿಕ್ಷಕರ ದಿನಾಚರಣೆ ದಿನದಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಇಲಾಖೆ ಹೊಸದೊಂದು ಯೋಜನೆ ಪ್ರಾರಂಭ ಮಾಡಲು ಮುಂದಾಗಿದೆ ಹೌದು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಜನರು ವಾಸಿಸುವ ಪ್ರದೇಶಗಳ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರ ಕಾರ್ಯಕ್ರಮದ ಅಡಿ ಸಂಜೆ ಟ್ಯೂಷನ್’ಗೆ ಸೆ. 5ರಿಂದ ಶಿಕ್ಷಕರ ದಿನಾಚರಣೆ ದಿನದಂದು ಆರಂಭವಾಗಲಿದೆ.
ಬಿಬಿಎಂಪಿ ಕಲ್ಯಾಣ ವಿಭಾಗದಿಂದ ಪ್ರಾಯೋಗಿಕವಾಗಿ ನಗರದ 10 ಪ್ರದೇಶದಲ್ಲಿ ಪ್ರಾರಂಭಿಸಲಾಗುತ್ತಿದ್ದು ಅಗಸ್ತ್ಯ ಪೌಂಡೇಷನ್ ಸಂಸ್ಥೆಗೆ ಈ 10 ಕೇಂದ್ರಗಳ ನಿರ್ವಹಣೆ ಜವಾಬ್ದಾರಿಯನ್ನು ನೀಡಲಾಗಿದೆ.ಮಕ್ಕಳಿಗೆ ತರಬೇತಿ ನೀಡುವ ಶಿಕ್ಷಕರಿಗೆ ಗೌರವ ಧನ ಸೇರಿದಂತೆ ಪ್ರತಿ ಕೇಂದ್ರದ ನಿರ್ವಹಣೆಗೆ ಮಾಸಿಕ 3,500 ರೂ ನೀಡಲಾಗುತ್ತದೆ. ಕೇಂದ್ರದ 500 ಮೀಟರ್ ವ್ಯಾಪ್ತಿಯ 3 ರಿಂದ 5 ನೇ ತರಗತಿಯ 25 ರಿಂದ 30 ವಿದ್ಯಾರ್ಥಿಗಳಿಗೆ ಟ್ಯೂಷನ್ ನೀಡಲಾಗುವುದು.ಕೊಳಗೇರಿ ಪ್ರದೇಶ ಸೇರಿದಂತೆ ಬಡ ವರು ಹೆಚ್ಚಾಗಿರುವ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳ ಲಾಗಿದೆ.ಮಕ್ಕಳಿಗೆ ಹೆಚ್ಚಿನ ಕಲಿಕೆ,ತರಬೇತಿ,ಹೋಂ ವರ್ಕ್, ವಿವಿಧ ಕೌಶಲ್ಯ ವೃದ್ದಿಸುವ ಉದ್ದೇಶದಿಂದ ಈ ಅಧ್ಯಯನ ಕೇಂದ್ರ ಪ್ರಾರಂಭಿಸಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿ ಗಳು ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ಶಾಲೆ ಮಾತ್ರವಲ್ಲದೇ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಈ ಅಧ್ಯಯನ ಕೇಂದ್ರಗಳಿಗೆ ಪ್ರವೇಶ ಪಡೆಯಬಹುದಾಗಿದೆ.ಸದ್ಯ ಬಿಬಿಎಂಪಿ ಶಾಲಾ ಕೊಠಡಿ ಗಳನ್ನು ಬಳಕೆ ಮಾಡಿಕೊಳ್ಳಲಾಗುವುದು.ಈ ಯೋಜನೆ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ನಗರದಲ್ಲಿ ಮತ್ತು ರಾಜ್ಯದ ಹಲವೆಡೆ ಹಂತ ಹಂತವಾಗಿ ಹಾಗೆ 200ರಿಂದ 300 ಅಧ್ಯಯನ ಕೇಂದ್ರ ಆರಂಭಿಸುವುದಕ್ಕೆ ಬಿಬಿಎಂಪಿ ಚಿಂತನೆ ನಡೆಸಿದೆ.
ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಜನರು ವಾಸಿಸುವ ಪ್ರದೇಶಗಳ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ‘ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರ’ ಕಾರ್ಯಕ್ರಮದ ಅಡಿ ಸಂಜೆ ಟ್ಯೂಷನ್ ಆಗಸ್ಟ್ 15ರಿಂದ ಪ್ರಾಯೋಗಿಕವಾಗಿ ನಗರದ 10 ಪ್ರದೇಶದಲ್ಲಿ ಪ್ರಾರಂಭಿ ಸಲು ಯೋಜನೆ ಹಾಕಿಕೊಳ್ಳಲಾಗಿತ್ತು.ಆದರೆ ಬಳಿಕ ಮುಂದೂಡಲಾಗಿತ್ತು.ಬಿಬಿಎಂಪಿ ಕಲ್ಯಾಣ ವಿಭಾಗದಿಂದ ಬಡ ವಿದ್ಯಾರ್ಥಿಗಳಿಗಾಗಿ ಸಂಜೆ 5.30ರಿಂದ 7ರವರೆಗೆ ಟ್ಯೂಷನ್ ಇರಲಿದೆ.ಪ್ರತಿ ಕೇಂದ್ರದಲ್ಲಿ 25ರಿಂದ 30 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು.ಬಿಬಿಎಂಪಿ ಶಾಲೆ ಮಾತ್ರವಲ್ಲದೇ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಈ ಅಧ್ಯಯನ ಕೇಂದ್ರಗಳಿಗೆ ಪ್ರವೇಶ ಪಡೆಯಬಹುದು
ಈ ಮಹಿಳೆ ಮಕ್ಕಳನ್ನು ಶಾಲೆಗೆ ಕಳಿಸೋದೆ ಇಲ್ಲ!
1.ಕ್ಲೀವ್ ಲ್ಯಾಂಡ್ ಟೌನ್ ಬಿಬಿಎಂಪಿ ಶಾಲಾ-ಕಾಲೇಜು
2.ಭೈರವೇಶ್ವರ ನಗರ ಬಿಬಿಎಂಪಿ ಶಾಲಾ-ಕಾಲೇಜು
3.ಶ್ರೀರಾಮಪುರ ಬಿಬಿಎಂಪಿ ಶಾಲಾ-ಕಾಲೇಜು
4.ಕಸ್ತೂರಿ ಬಾ ನಗರ ಬಿಬಿಎಂಪಿ ಶಾಲಾ-ಕಾಲೇಜು
5.ಆಸ್ಟೀನ್‌ಟೌನ್ ಬಾಲಕರ ಶಾಲೆ
6.ಗಂಗಾನಗರ ಪಾಲಿಕೆ ಪ್ರೌಢ ಶಾಲೆ
7.ಪಾದರಾಯನಪುರ ಪಾಲಿಕೆ ಶಾಲೆ-ಕಾಲೇಜು
8.ಮತ್ತಿಕೆರೆ ಬಿಬಿಎಂಪಿ ಶಾಲಾ-ಕಾಲೇಜು
9.ವಿಜಯನಗರ ಬಿಬಿಎಂಪಿ ಶಾಲಾ-ಕಾಲೇಜು
10.ಪಿಳ್ಳಣ್ಣ ಗಾರ್ಡ್‌ನ್ ಬಿಬಿಎಂಪಿ ಶಾಲಾ-ಕಾಲೇಜು
ಶಿಕ್ಷಕರ ದಿನಾಚರಣೆಯಂದು ಸಾಂಕೇತಿಕವಾಗಿ ಹತ್ತು ಸ್ಥಳ ದಲ್ಲಿ ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರ ಆರಂಭಿಸಲಾ ಗುತ್ತಿದ್ದು ಪ್ರತಿ ಕೇಂದ್ರಕ್ಕೆ ಪಾಲಿಕೆ ಮಾಸಿಕ 3,500 ವೆಚ್ಚ ಮಾಡಲಿದೆ.ಇದರಲ್ಲಿ 1,500 ಬೋಧನೆ ಮಾಡುವ ಶಿಕ್ಷಕ ರಿಗೆ ಗೌರವ ಧನ, ಉಳಿದ 2 ಸಾವಿರ ತರಬೇತಿ ಸಾಮಗ್ರಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರ ಕಾರ್ಯಕ್ಕೆ ವೆಚ್ಚ ಮಾಡಲಾಗುತ್ತದೆ.