ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಅಧಿಸೂಚನೆ ಹೊರಬೀಳುತ್ತದ್ದಂತೆ ಇತ್ತ ನಾಮಪತ್ರ ಸಲ್ಲಿಕೆ ಇಂದಿನಿಂದಲೇ ಆರಂಭ ಗೊಂಡಿದೆ.ಇಂದಿನಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದ್ದು ಮೊದಲನೇಯ ದಿನವಾದ ಇಂದು ಒಂದು ನಾಮಪತ್ರ ಸಲ್ಲಿಕೆಯಾಗಿಲ್ಲ.ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆಗೆ ಅವಕಾಶವನ್ನು ನೀಡಲಾಗಿದ್ದು ಆರಂಭಗೊಂಡಿದ್ದರು ಕೂಡಾ ನಾಮಪತ್ರವನ್ನು ಯಾರು ಸಲ್ಲಿಸಿಲ್ಲ.ಇನ್ನೂ ಮೊದಲನೇಯ ದಿನ ವಾದ ಇಂದು ಯಾರು ಕೂಡಾ ಒಂದು ನಾಮಪತ್ರ ಸಲ್ಲಿಸಿಲ್ಲ.
ಈಗಾಗಲೇ ಪಾಲಿಕೆಗೆ ಅಧಿಸೂಚನೆಯನ್ನು ಜಿಲ್ಲಾಧಿ ಕಾರಿ ಹೊರಡಿಸಿದ್ದು ಆಗಸ್ಟ್ 23 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಇತ್ತ ಇನ್ನೊಂದೆಡೆ ಮೂರು ಪಕ್ಷದವರು ಅಭ್ಯರ್ಥಿ ಗಳ ಹುಡುಕಾಟದಲ್ಲಿ ತೊಡಗಿ ದ್ದಾರೆ.ಹುಬ್ಬಳ್ಳಿ ಧಾರವಾಡದಲ್ಲಿ ಒಟ್ಟು 82 ವಾರ್ಡ್ ಗಳಿದ್ದು ಇವುಗಳಿಗೆ ಚುನಾವಣೆ ನಡೆಯುತ್ತಿದ್ದು 8,11,537 ಮತದಾರರಿದ್ದಾರೆ.ಆಗಸ್ಟ್ 23 ಕ್ಕೆ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಲಿದ್ದು ಆಗಸ್ಟ್ 24 ಕ್ಕೆ ನಾಮಪತ್ರ ಪರಿಶೀಲನೆ.ನಾಮಪತ್ರ ವಾಪಸ್ ಪಡೆಯಲು ಅಗಸ್ಟ 26 ಕ್ಕೆ ಕೊನೆಯ ದಿನಾಂಕ ವಾಗಿದ್ದು ಸೆಪ್ಟಂಬರ 3 ರಂದು ಮತದಾನ ನಡೆಯ ಲಿದೆ.
ಇನ್ನೂ ಸೆಪ್ಟಂಬರ 5 ಕ್ಕೆ ಅವಶ್ಯಕವಿದ್ದರೆ ಮರು ಮತದಾನ,ಸೆಪ್ಟಂಬರ 6 ಕ್ಕೆ ಮತ ಏಣಿಕೆ ನಡೆಯ ಲಿದೆ.ಜೊತೆಗೆ ಚುನಾವಣಾ ಸಮಯದಲ್ಲಿ 16 ಚುನಾವಣಾ ಅಧಿಕಾರಿಗಳು ಮತ್ತು 16 ಸಹಾಯಕ ಚುನಾವಣಾ ಆಧಿಕಾರಿಗಳ ಕಾರ್ಯ ನಿರ್ವಹಿಸ ಲಿದ್ದು ಪ್ರತಿಯೊಬ್ಬ ಅಭ್ಯರ್ಥಿ 3 ಲಕ್ಷ ಹಣ ಖರ್ಚು ಮಾಡಬಹುದು,ಇನ್ನು ಚುನಾವಣಾ ಸಮಯದಲ್ಲಿ ಕೋವಿಡ್ ಪ್ರೊಟೋಕಲ್ ಬಳಸುವಂತೆ ಸೂಚಿಸ ಲಾಗಿದ್ದು ಯಾವುದೇ ಮೆರವಣಿಗೆಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ತಿಳಿಸಿದ್ದಾರೆ.