ಹುಬ್ಬಳ್ಳಿ –
ಕರ್ತವ್ಯ ಮುಗಿಸಿ ಮನೆಗೆ ಹೊರಟಿದ್ದ ASI ಒಬ್ಬರಿಗೆ ವಾಹನವೊಂದು ಡಿಕ್ಕಿಯಾದ ಘಟನೆ ಹುಬ್ಬಳ್ಳಿಯ ಲ್ಲಿ ನಡೆದಿದೆ.ನಗರದ ಗೋಕುಲ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ

ಫಕೀರಪ್ಪ ಐ ತಡಸ ಗಾಯಗೊಂಡ ಎಎಸ್ಐ ಆಗಿದ್ದಾರೆ.ಗೋಕುಲ ಪೊಲೀಸ್ ಠಾಣೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಗಷ್ಟೇ ಕರ್ತವ್ಯ ಮುಗಿಸಿ ಮನೆಗೆ ಹೊರಟಿದ್ದ ಸಮಯದಲ್ಲಿ ಈ ಒಂದು ಅಪಘಾತ ಸಂಭವಿಸಿದೆ

ತಲೆಗೆ ತೀವ್ರವಾಗಿ ಪೆಟ್ಟು ಬಿದ್ದದ್ದು ಸಧ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಯನ್ನು ಪಡೆಯುತ್ತಿದ್ದಾರೆ ಇನ್ನೂ ಇತ್ತ ಅಪಘಾತ ಮಾಡಿದ ವಾಹನದ ಕುರಿತು ಪೊಲೀಸರು ಪರಿಶೀಲನೆ ಮಾಡತಾ ಇದ್ದಾರೆ