ಉಪ್ಪಿನ ಬೆಟಗೇರಿ –
ಧಾರವಾಡ ತಾಲ್ಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಐತಿಹಾಸಿಕ ಮೂರು ಸಾವಿರ ವಿರಕ್ತಮಠದ ಜಾತ್ರೆ ಯುಗಾದಿ ಯಲ್ಲಿ ನಡೆಯಲಿದೆ.ಈ ಒಂದು ದೇವಸ್ಥಾ ನದ ಜಾತ್ರೆ ಕುರಿತು ಕೋವಿಡ್ ಹಿನ್ನೆಲೆಯಲ್ಲಿ ಮಾಡ ಬೇಕಾ ಮಾಡಬಾರದಾ ಈ ಒಂದು ವಿಚಾರ ಕುರಿತು ಉಪ್ಪಿನ ಬೆಟಗೇರಿ ಗ್ರಾಮದ ಮಠದಲ್ಲಿ ಪೂರ್ವ ಭಾವಿ ಸಭೆ ನಡೆಯಿತು ಮಠದ ಸ್ವಾಮಿಜಿ ಕುಮಾರ ವೀರುಪಾಕ್ಷ ಮಹಾಸ್ವಾಮಿಗಳು ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆ ಆರಂಭಕ್ಕೂ ಮುನ್ನ ಮಠದ ಜೀರ್ಣೋದ್ಧಾರ ಕ್ಕೆ 50 ಲಕ್ಷ ರೂಪಾಯಿ ಅನುದಾನವನ್ನು ನೀಡಿದ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರನ್ನು ಮಠದ ಮತ್ತು ಸಮಸ್ತ ಉಪ್ಪಿನ ಬೆಟ ಗೇರಿ ಗ್ರಾಮಸ್ಥರ ಪರವಾಗಿ ಸನ್ಮಾನಿಸಿ ಗೌರವಿಸಲಾ ಯಿತು.
ಇನ್ನೂ ನಂತರ ಆರಂಭಗೊಂಡ ಪೂರ್ವ ಭಾವಿ ಸಭೆಯಲ್ಲಿ ಇದೇ ತಿಂಗಳ ಯುಗಾದಿ ದಿನದಂದು ನಡೆಯಲಿರುವ ಮಠದ ಜಾತ್ರೆ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಯಿತು.
ಇನ್ನೂ ಇದೇ ವೇಳೆ ಸಭೆಯಲ್ಲಿ ತಾಲ್ಲೂಕಿನ ತಹಶೀಲ್ದಾರ್, ಪೊಲೀಸ್ ಇನ್ಸ್ಪೆಕ್ಟರ್, ಸೇರಿದಂತೆ ಗ್ರಾಮದ ಮುಖಂಡರು ಹಿರಿಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಜಾತ್ರೆಯನ್ನು ಸರಳವಾಗಿ ಕೋವಿಡ್ ನ್ನು ಗಮನದಲ್ಲಿಟ್ಟುಕೊಂಡು ಆಚರಣೆ ಮಾಡುವ ಕುರಿತು ಮಾತುಗಳು ಕೇಳಿ ಬಂದವು
ಇನ್ನೂ ಇದೇ ವೇಳೆ ಶಾಸಕರಾದ ಅಮೃತ ದೇಸಾಯಿ ಮಾತನಾಡಿ ಕಳೆದ ವರುಷದ ಕೋವಿಡ್ ಚಿತ್ರಣ ವನ್ನು ಮತ್ತು ಸಧ್ಯ ಬಂದಿರುವ ಎರಡನೇ ಅಲೆಯ ವಾಸ್ತವತೆಯನ್ನು ತಿಳಿ ಹೇಳಿದರು. ಅಲ್ಲದೇ ಇಂಥಹ ಪರಿಸ್ಥಿತಿಯ ನಡುವೆ ಜಾತ್ರೆಯನ್ನು ಸರಳವಾಗಿ ಮಾಡೋಣ ಎಂದರು.
ಇನ್ನೂ ಅಂತಿಮವಾಗಿ ಸಭೆಯಲ್ಲಿ ಕೋವಿಡ್ ಮಾರ್ಗಸೂಚಿ ಗಳನ್ನು ಗಮನದಲ್ಲಿಟ್ಟುಕೊಂಡು ಆಚರಣೆ ಮಾಡಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಶಾಸಕ ಅಮೃತ ದೇಸಾಯಿ,ತವನಪ್ಪ ಅಷ್ಟಗಿ,ರವೀಂದ್ರ ಯಲಿಗಾರ, ವೀರಣ್ಣ ಪರಾಂಡೆ, ಚನ್ನಬಸಪ್ಪ ಮಸೂತಿ,ಕಲ್ಲಪ್ಪ ಪುಡಕಲಕಟ್ಟಿ,ಶಿವಪ್ಪ ವಿಜಾಪುರ, ಬಾಬು ತಳವಾರ, ಲಕ್ಷ್ಮೀ ಆಯಟ್ಟಿ, ಅಬ್ದುಲ್ ಲಂಗೂಟಿ, ಅಶೋಕ ಮಸೂತಿ,ಗ್ರಾಮ ಪಂಚಾಯತಿ ಸರ್ವ ಸದಸ್ಯರು ಗ್ರಾಮದ ಹಿರಿಯರು ಪಾಲ್ಗೊಂಡಿದ್ದರು.ಇನ್ನೂ ಕಾರ್ಯಕ್ರಮವನ್ನು ಶಿಕ್ಷಕರಾದ ಕಾಶಪ್ಪ ದೊಡವಾಡ ನಿರೂಪಿಸಿದರು, ಸುರೇಶ ತಳವಾಳ ವಂದಿಸಿದರು