ಹುಬ್ಬಳ್ಳಿ –
ಮಾನ್ಯರೆ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿ ಸಿದಂತೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ರಿ ಹುಬ್ಬಳ್ಳಿಯ ರಾಜ್ಯಾಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ಈ ಮೂಲಕ ತಮ್ಮಲ್ಲಿ ವಿನಂತಿಸುವುದೇನೆಂದರೆ ಕೋವಿಡ್ -19 ಎರಡನೇ ಅಲೆಯ ತೀವ್ರತೆ ಹಿನ್ನೆಲೆಯಲ್ಲಿ ಶಾಲಾ ಆರಂಭ ವಿಳಂಬವಾಗಿದ್ದು ಮಾನ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ದಿನಾಂಕ 04-06-2021 ರಂದು 2021-22 ನೇ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಬಿಡುಗಡೆ ಮಾಡಿದ್ದು ಸದರಿ ಆದೇಶದಲ್ಲಿ ಜುಲೈ 1 ರಿಂದ ಶಾಲೆಗಳನ್ನು ಆರಂಭಿಸುವಂತೆ ಹಾಗೂ ಜೂನ್ 15 ರಿಂದ ಮುಖ್ಯಗುರುಗಳು ದಾಖಲಾತಿ ಪ್ರಕ್ರಿಯೆಯನ್ನು ಹಾಗೂ ಸಹ ಶಿಕ್ಷಕರು ಪೂರ್ವ ತಯಾರಿಯನ್ನು ಶಾಲೆಗಳಿಗೆ ಹಾಜರಾಗಿ ಆರಂಭಿಸುವಂತೆ ಆದೇಶಿಸಿದ್ದಾರೆ
ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಕೋವಿದ 19 ಎರಡನೇ ಅಲೆಯ ತೀವ್ರತೆ ಹೆಚ್ಚಿರುವ ಕಾರಣ ಹಾಗೂ ಈ ಅಲೆಯಲ್ಲಿ ರಾಜ್ಯದ1000 ಕ್ಕೂ ಹೆಚ್ಚು ಶಿಕ್ಷಕರು ಕೋವಿದ 19 ಗೆ ಬಲಿಯಾ ಗಿದ್ದು ಇಂದಿಗೂ ಶಿಕ್ಷಕರ ಸರಣಿ ಸಾವುಗಳು ನಿಂತಿಲ್ಲ. 45 ಕ್ಕಿಂತ ಕಡಿಮೆ ವಯೋಮಾನದ ಶಿಕ್ಷಕರಿಗೆ ವ್ಯಾಕ್ಸೀನ್ ಹಾಕಿಲ್ಲ. ಸೂಕ್ತ ಸಾರಿಗೆ ವ್ಯವಸ್ಥೆ ಕೂಡ ಇರುವುದಿಲ್ಲ ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಜೂನ್ 15 ರಿಂದ ಶಾಲೆಗಳಿಗೆ ಹಾಜರಾಗಲು ಶಿಕ್ಷಕರಿಗೆ ಅದರಲ್ಲಿಯೂ ಮಹಿಳಾ ಶಿಕ್ಷಕಿಯರಿಗೆ ತುಂಬಾ ಅನಾನುಕೂಲ ಆಗುತ್ತದೆ ಕಾರಣ ದಿನಾಂಕ 04-06-2021 ರ ಮಾನ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹೋರಡಿಸಿರುವ ಆದೇಶವನ್ನು ಪುನರ್ ಪರಿಶೀಲಿಸುವಂತೆ
ಸೂಚಿಸಲು ನಮ್ಮ ಸಂಘವು ತಮ್ಮಲ್ಲಿ ಈ ಪತ್ರ ಮುಖೇನ ಮಾನ್ಯ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಎಸ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎಸ್. ವಿ.ಸಂಕನೂರ ಹಾಗೂ ಶಶಿಲ್ ನಮೋಶಿ. ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಸಾಹೇಬರಿಗೆ ಈ ಮೂಲಕ ನಮ್ಮ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಶೋಕ ಸಜ್ಜನ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಉಪ್ಪಿನ್ ಗೌರವಾಧ್ಯಕ್ಷರಾದ ಎಲ್ ಐ ಲಕ್ಕಮ್ಮನವರ ಕೋಶಾಧ್ಯಕ್ಷರಾದ ಎಸ್ ಎಫ್ ಪಾಟೀಲ್ ಕಾರ್ಯಾಧ್ಯಕ್ಷರಾದ ಶರಣಪ್ಪ ಗೌಡ ಆರ್ ಕೆ ಮಹಾಪೋಷಕರಾದ ಪವಾಡಪ್ಪ ಕಾಂಬ್ಳೆ ಉಪಾಧ್ಯಕ್ಷರುಗಳಾದ ಗೋವಿಂದ ಜುಜಾರೆ ಹನುಮಂತಪ್ಪ ಮೇಟಿ. ಡಿ.ಎಸ್.ಭಜಂತ್ರಿ.ಕುಕನೂರ.ರಾಮಪ್ಪ ಹಂಡಿ .ಎಮ್ ಆಯ್ ಮುನವಳ್ಳಿ ಮಹ್ಮದ್ ರಫಿ .ಡಿ ಟಿ ಬಂಡಿವಡ್ಡರ ಶರಣಬಸವ ಬನ್ನಿಗೋಳ.ಎಂ.ವಿ ಕುಸುಮಾ. ರಾಜಶ್ರೀ ಪ್ರಭಾಕರ್ ಜಿ ಟಿ ಲಕ್ಷ್ಮೀದೇವಮ್ಮ ಕಲ್ಪನಾ ಚಂದನಕರ. ರವಿ ಬಂಗೆನ್ನವರ ಶಿವರಡ್ಡಿ ಅಶೋಕ.ಬಿಸೆರೊಟ್ಟಿ ನಾಗರಾಜ್ ಆತಡಕರ ನಾಗರಾಜ್ ಕೆ ರೇಖಾ ದೇವಿ ದೇವಿಕಾ ಕಮ್ಮಾರ ಮುಂತಾದ ಪದಾಧಿಕಾರಿಗಳು ಮನವಿ ಮಾಡುತ್ತೇವೆ