ಅಣ್ಣಿಗೇರಿ –
19 ವರುಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾದ ಸೈನಿಕನನ್ನು ಗ್ರಾಮಕ್ಕೆ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಹೌದು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಇಂಥಹದೊಂದು ಸಂತಸದ ಚಿತ್ರಣವೊಂದು ಕಂಡು ಬಂದಿತು.
ಪಟ್ಟಣದ ಅಮೃತೇಶ್ವರ ದೇವಸ್ಥಾನ ಮುಂಭಾಗದಲ್ಲಿ ನಿವೃತ್ತ ಸೈನಿಕ ರಸೂಲ್‌ಸಾಬ್ ದೊಡ್ಡಮನಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.ಮದ್ರಾಸ್ ರೆಜಿಮೆಂಟ್‌ನಲ್ಲಿ ನಿರಂತರ 19 ವರ್ಷಗಳವರೆಗೆ ದೇಶ ಸೇವೆ ಸಲ್ಲಿಸಿ ನಿವೃತ್ತರಾಗಿ ಗ್ರಾಮಕ್ಕೆ ಬಂದ ಸೈನಿಕ ರಸೂಲ್‌ಸಾಬ್ ದೊಡ್ಡಮನಿ ಅವರನ್ನು ಪಟ್ಟಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ದೇಶ ಸೇವೆಗಾಗಿ ಹಗಲಿರುಳು ಶ್ರಮಿಸಿ ಭಾರತ ಮಾತೆಯ ಋಣ ತೀರಿಸಿ ವಾಪಸಾಗಿರುವ ರಸೂಲ್‌ಸಾಬ್ ಅವರ ಕುಟುಂಬ ಇನ್ನಷ್ಟು ದೇಶಕ್ಕಾಗಿ ದುಡಿಯಲಿ ಎಂದು ಮುಖಂಡ ಷಣ್ಮುಖ ಗುರಿಕಾರ ಆಶಿಸಿದರು.
ಪಟ್ಟಣದ ಆರಾಧ್ಯ ದೈವ ಅಮೃತೇಶ್ವರ ಹಾಗೂ ಜುಮ್ಮಾ ಮಸೀದಿಗೆ ಭೇಟಿ ನೀಡಿ ದರ್ಶನ ಪಡೆದರು. ಇನ್ನೂ ಈ ಒಂದು ಸ್ವಾಗತ ಕಾರ್ಯಕ್ರಮದಲ್ಲಿ
ಸ್ಥಳೀಯ ಮುಖಂಡರಾದ ಶಿವಶಂಕರ ಕಲ್ಲೂರ, ದಾವಲಸಾಬ ದರವಾನ, ಅನ್ವರ ಹುಬ್ಬಳ್ಳಿ, ಮಹಾಂತೇಶ ವಸ್ತ್ರದ, ಮಂಜು ನಾಯ್ಕ, ಎ.ಎ.ದೊಡ್ಡಮನಿ, ಹಸನಸಾಬ ಘೂಡು ನಾಯ್ಕರ, ಹಸನನಾಯ್ಕ ನಾಯ್ಕವಾಡಿ, ಕೆ.ಐ.ಅಣ್ಣಿಗೇರಿ, ಬಿ.ವಿ.ಅಂಗಡಿ, ಎ.ಆರ್.ಅಕ್ಕಿ ಸೇರಿದಂತೆ ಪಟ್ಟಣದ ಹಲವರು ಯುವಕರು ಮುಖಂಡರು ಪಾಲ್ಗೊಂಡಿದ್ದರು.