ಹುಬ್ಬಳ್ಳಿ –
ಪ್ರೂಟ್ ಇರ್ಫಾನ್ ಕೊಲೆ ಕೇಸ್ ನಲ್ಲಿ ಹಿಂಡಲಗಾ ಜೈಲು ಸೇರಿರುವ ಧಾರವಾಡದ ರೌಡಿ ಶೀಟರ್ ಒಬ್ಬ ಮಹಿಳೆಯೋರ್ವರಿಗೆ ಫೋನ್ ಮಾಡಿ ಹಣ ನೀಡುವಂತೆ ಧಮ್ಕಿ ಹಾಕಿದ್ದಾನೆ ಎಂಬ ಘಟನೆ ಬೆಳಕಿಗೆ ಬಂದಿದೆ.

ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಆರೋಪಿ ತೌಸಿಫ್ ಜೈಲಿನಲ್ಲಿದ್ದುಕೊಂಡೇ ಧಾರವಾಡ ಮೂಲದ ಶೆಟ್ಟರ್ ಕಾಲೋನಿಯ ಸ್ನೇಹಾ ದೇಸಾಯಿ ಎಂಬ ಮಹಿಳಾ ಉದ್ಯಮಿಗೆ ಬೆದರಿಕೆ ಹಾಕಿ ತನ್ನ ಬೇಲ್ ಗಾಗಿ 3 ಲಕ್ಷ ರೂ ಹಣ ವಸೂಲಿ ಯತ್ನ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

ಸ್ನೇಹಾ ಹಾಗೂ ತೌಸಿಫ್ SSLC ಯಲ್ಲಿ ಸ್ನೇಹಿತರಾಗಿದ್ದರು. ಸ್ನೇಹಾ ತನ್ನ ಉದ್ಯಮಕ್ಕೆ ತೌಸಿಫ್ ಬಳಿ ಹಣ ಪಡೆದು ಬಳಿಕ ಬಡ್ಡಿ ಸಮೇತ ಹಿಂದಿರುಗಿಸಿದ್ದರು.

ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ತೌಸಿಫ್ ಈಗ ಸ್ನೇಹಾಗೆ ಕರೆ ಮಾಡಿ ಬೆದರಿಕೆ ಹಾಕಿದ್ದಲ್ಲದೇ ತನ್ನ ಬೇಲ್ ಗಾಗಿ ಹಣ ನೀಡಿವುಂತೆ ಹೇಳಿ ವಸೂಲಿ ಮಾಡಿದ್ದಾನೆ ಎಂಬ ವಿಷಯ ಹೊರಬಿದ್ದಿದೆ. ಒಟ್ಟಾರೆ ಬೆಳಗಾವಿ ಹಿಂಡಲಗಾ ಜೈಲಿನ ಕರ್ಮಕಾಂಡ ಇದೀಗ ಬಯಲಾಗಿದ್ದು, ಜೈಲು ಅಧಿಕಾರಿಗಳು ಯಾವುದೇ ವಿಷಯ ಖಚಿತ ಪಡಿಸುವ ಗೋಜಿಗೆ ಹೋಗಿಲ್ಲ.