ಬೆಂಗಳೂರು –
KSPSTA ಶಿಕ್ಷಕರ ಸಂಘಕ್ಕೆ ವಾರ್ಷಿಕ ಎರಡು ನೂರು ರೂಪಾಯಿ ಸದಸ್ಯತ್ವ ನೀಡಲು ಶಿಕ್ಷಕರೊಬ್ಬ ರು ನಿನ್ನೆ ವಿರೋಧ ಮಾಡಿ ಪತ್ರವನ್ನು ಬರೆದ ವಿಚಾರ ಕುರಿತಂತೆ ಸುದ್ದಿ ಸಂತೆಯ ಸುದ್ದಿ ಸಾಕಷ್ಟು ಪ್ರಮಾಣದಲ್ಲಿ ಸದ್ದು ಮಾಡಿದೆ.ಪತ್ರವನ್ನು ಬರೆದು ನೋವನ್ನು ತೊಡಿಕೊಂಡಿದ್ದ ಹಿರಿಯ ಶಿಕ್ಷಕ ಎಂ ಜಿ ಚಿರಂತಿಮಠ ಈಗ ಸುದ್ದಿ ಸಂತೆ ಯೊಂದಿಗೆ ಮಾತನಾಡಿದ್ದಾರೆ.
ಬರವಣಿಗೆಯೊಂದಿಗೆ ನಿನ್ನೆ ತಮ್ಮಲ್ಲಿನ ಭಾವನೆ ಯನ್ನು ಆ ಒಂದು ಸಂಘದ ವಿರುದ್ದ ಬಹಿರಂಗವಾಗಿ ಹಂಚಿಕೊಂಡಿದ್ದ ಇವರು ಮಾತನಾಡಿದ್ದಾರೆ.ಸಂಘಕ್ಕೆ ಯಾಕೇ ನಾನು 200 ರೂಪಾಯಿ ಹಣ ಕೊಡಲು ಒಪ್ಪಿಕೊಂಡಿಲ್ಲ ಬೇಡ ಅಂದಿದ್ದು ಯಾಕೇ ಸಮಸ್ಯೆ ಆಗಿದ್ದು ಎಲ್ಲಿ ಏನು ಹಣ ಕೊಟ್ಟರು ಏನಾದರೂ ಕೆಲಸ ಕಾರ್ಯಗಳು ಅನುಕೂಲವಾಗಿದೆಯಾ ಇನ್ನೂ ಯಾರು ಯಾರು ಸದಸ್ಯತ್ವ ಹಣವನ್ನು ಕೊಡಬೇಕು ಕೊಡಲು ಅಧಿಕಾರವಿದೆ ಹೀಗೆ ಸಮಗ್ರವಾದ ಮಾಹಿ ತಿಯನ್ನು ಮಾತುಗಳೊಂದಿಗೆ ನಿವೃತ್ತಿಯ ಅಂಚಿನಲ್ಲಿ ರುವ ಈ ಹಿರಿಯ ಶಿಕ್ಷಕರು ಹಂಚಿಕೊಂಡಿದ್ದಾರೆ.
ನಾಡಿನ ಪ್ರಜ್ಞಾವಂತ ಶಿಕ್ಷಕರ ಬಂಧುಗಳ ಮುಂದೆ ನೋವಿನ ಮಾತುಗಳ ಪುಟಗಳನ್ನು ತೆರೆದಿಟ್ಟಿದ್ದಾರೆ. ಇದರೊಂದಿಗೆ ಪ್ರಮುಖವಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಪ್ರತಿವರ್ಷ ರಾಜ್ಯದ ಎಲ್ಲಾ ಶಿಕ್ಷಕರ ವೇತನದಲ್ಲಿ ಪ್ರತಿಯೊಬ್ಬ ಶಿಕ್ಷಕರ ವೇತನದಲ್ಲಿ ಕಟಾವಣೆ ಮಾಡುತ್ತಿದ್ದು, ಆದರೆ ಆ ಸಂಘದಿಂದ ಇದುವರೆಗೆ ಯಾವುದೇ ಶಿಕ್ಷಕರ ಉಪಯೋಗವಾಗುವಂತ ಕಾರ್ಯಕ್ರಮ ಗಳು ಆಗಿರುವುದಿಲ್ಲ ಜೊತೆಗೆ ಸತತ ಸುಮಾರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಸಮಸ್ಯೆ ಹಾಗೂ ಸಿ & ಆರ್ ರೂಲ್ ಬಗ್ಗೆ ಆಗಲಿ ಶಿಕ್ಷಕರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆ ಸಂಘವು ಒಮ್ಮೆಯೂ ಬೀದಿಗಿಳಿದು ಹೋರಾಟ ಮಾಡಿರುವುದಿಲ್ಲ ಆದ್ದ ರಿಂದ ರಾಜ್ಯದ ಯಾವುದೇ ಶಿಕ್ಷಕರು ಸದರಿ ಸಂಘಕ್ಕೆ ವಾರ್ಷಿಕ ಸದಸ್ಯತ್ವವನ್ನು ಕೊಡಬಾರದುಎಂದಿದ್ದಾರೆ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿರಿಯ ಶಿಕ್ಷಕ ಎಂ ಜಿ ಚರಂತಿಮಠ.ಅಲ್ಲದೇ ನಿವೃತ್ತಿಗೆ ಐದು ವರ್ಷದೊಳಗೆ ಇರುವ ಶಿಕ್ಷಕರು ತಮ್ಮ ಸದಸ್ಯತ್ವ ವನ್ನು ಯಾವುದೇ ಕಾರಣಕ್ಕೂ ಕೊಡಬೇಡಿ, ಏಕೆಂದ ರೆ ಮುಂದಿನ ಅವಧಿಗೆ ಆ ಸಂಘಕ್ಕೆ ಚುನಾವಣೆ ಯಲ್ಲಿ ಸ್ಪರ್ಧಿಸಲು ಅಥವಾ ಮತ ಚಲಾಯಿಸುವ ಅಧಿಕಾರ ಸಹವಿರುವುದಿಲ್ಲ ಎಂದು ಇದೇ ಸಂದರ್ಭ ದಲ್ಲಿ ಚರಂತಿಮಠ ಆಗ್ರಹಿಸಿದರು ಗ್ರಾಮೀಣ ಶಿಕ್ಷಕರ ಸಂಘ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಸಂಘಗಳ ಪರಿಷತ್ತು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎನ್ನುತ್ತಾ ಮಾತಿನ ಮೂಲಕ ನೋವನ್ನು ಹೇಳಿಕೊಂ ಡು ಕಳೆದ ಹಲವು ದಿನಗಳಿಂದ ತೀವ್ರವಾಗಿ ಚರ್ಚೆ ಯಾಗುತ್ತಿದ್ದ ಸದಸ್ಯತ್ವ ವಿಚಾರ ಕುರಿತಂತೆ ಮಾತಿನ ಮೂಲಕ ಆ ಸಂಘದ ವಿರುದ್ದ ಬಾಂಬ್ ಸಿಡಿಸಿದ್ದಾರೆ
ಸಂಘದ ಒರ್ವ ಸದಸ್ಯರು ಹೀಗೆ ಬಹಿರಂಗವಾಗಿ ಹೇಳುತ್ತಿದ್ದರೂ ಕೂಡಾ ಸಂಘಟನೆಯ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿ ಸೇರಿದಂತೆ ಸರ್ವ ಸದಸ್ಯರು ಮೌನವಾಗಿರೊದು ದುರಂತವೇ ಸರಿ