ಧಾರವಾಡ –
ಮಾಜಿ ಸಚಿವ ವಿನಯ ಕುಲಕರ್ಣಿ ಅನುಪಸ್ಥಿತಿಯಲ್ಲಿ ಕುಟುಂಬದವರು ದೀಪಾವಳಿಯನ್ನು ಆಚರಣೆ ಮಾಡಿದ್ರು. ಈಗಾಗಲೇ ಮನೆಯ ಯಜಮಾನ ವಿನಯ ಕುಲಕರ್ಣಿ ಯೊಗೇಶಗೌಡ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಕಳೆದ ವಾರವಷ್ಟೇ ಸಿಬಿಐ ಅಧಿಕಾರಿಗಳು ಮಾಜಿ ಸಚಿವರನ್ನು ವಶಕ್ಕೇ ತಗೆದುಕೊಂಡು ವಿಚಾರಣೆ ಮಾಡಿದ ನಂತರ ಏಕಾಎಕಿಯಾಗಿ ಬಂಧಿಸಿದ್ದಾರೆ. ನಂತರ ಮತ್ತೇ ವಿಚಾರಣೆ ಮಾಡಿದ ನಂತರ ಸಧ್ಯ ನ್ಯಾಯಾಂಗ ಬಂಧನಕ್ಕೇ ಒಪ್ಪಿಸಿದ್ದಾರೆ.ಬೆಳಗಾವಿಯ ಹಿಂಡಗಲಾ ಜೈಲಿನಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ನ್ಯಾಯಾಂಗ ಬಂಧನದ ಅವಧಿ ಇನ್ನೂ 23 ವರೆಗೆ ಇದೆ. ಇವೆಲ್ಲದರ ನಡುವೆ ಮೊದಲ ಬಾರಿಗೆ ಮನೆಯ ಯಜಮಾನನಿಲ್ಲದ ದೀಪಾವಳಿಯನ್ನು ವಿನಯ ಕುಲಕರ್ಣಿ ಕುಟುಂಬದವರು ನೋವಿನಲ್ಲೂ ದೀಪಾವಳಿ ಪೂಜೆ ಮಾಡಿದ್ರು.
ಮನೆಯಲ್ಲಿ ಈಗಾಗಲೇ ಎಲ್ಲರ ಮುಖದಲ್ಲೂ ಎಲ್ಲರೂ ಕೂಡಾ ತುಂಬಾ ತುಂಬಾ ನೋಂದುಕೊಂಡು ದುಖಃದಲ್ಲಿದಾರೆ. ನಮ್ಮ ಮನೆಯ ಯಜಮಾನ ನಮ್ಮ ಡ್ಯಾಡಿ ಯಾವಾಗ ಆರೋಪ ಮುಕ್ತರಾಗಿ ಬರುತ್ತಾರೆಂದುಕೊಂಡು ಇಡೀ ಕುಟುಂಬದವರು ವಿನಯ ಕುಲಕರ್ಣಿ ಬರುವಿಕೆಯ ದಾರಿಯನ್ನು ಕಾಯುತ್ತಿದ್ದಾರೆ.
ಇವೆಲ್ಲದರ ನಡುವೆ ಪ್ರತಿ ವರುಷ ದೀಪಾವಳಿ ಬಂದರೆ ಸಾಕು ವಿನಯ ಡೈರಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜನರು ಬಂದು ಪೂಜೆಯಲ್ಲಿ ಪಾಲ್ಗೊಂಡು ವಿನಯ ಕುಲಕರ್ಣಿ ಕುಟುಂಬಕ್ಕೇ ಹಬ್ಬದ ಶುಭಾಶಯಗಳನ್ನು ಹೇಳಿ ಒಂದಿಷ್ಟು ಪೊಟೊ ಸೆಲ್ಪಿ ತಗೆಸಿಕೊಂಡು ಸ್ಟೇಟಸ್ ಹಾಕಿ ಫೇಸ್ ಬುಕ್ ಗೆ ಹಾಕಿ ಹ್ಯಾಪಿ ದೀಪಾವಳಿ ಎಂದು ಪೊಸ್ಟ್ ಮಾಡುತ್ತಿದ್ದರು. ವಿನಯ ಡೈರಿಯಲ್ಲಿನ ದೀಪಾವಳಿಯ ಪೂಜೆ ನೋಡುತ್ತಿದ್ದರೆ ಯಾವುದೇ ಗ್ರಾಮದಲ್ಲಿನ ದೊಡ್ಡ ಜಾತ್ರೆಯನ್ನು ನೋಡಿದ ಹಾಗೇ ಆಗುತ್ತಿತ್ತು. ಆದರೆ ಈವರುಷದ ಚಿತ್ರಣವನ್ನು ನೋಡಿದ್ರೆ ಪ್ರತಿವರುಷ ಅದ್ದೂರಿಯಾಗಿ ಮಾಡುತ್ತಿದ್ದ ವಿನಯ ಡೈರಿಯಲ್ಲೂ ಕೂಡಾ ಯಜಮಾನನ ಅನುಪಸ್ಥಿತಿ ಕಾಡುತ್ತಿದ್ದು. ನಾಯಕ ವಿನಯ ಕುಲಕರ್ಣಿ ಅನುಪಸ್ಥಿತಿಯಲ್ಲಿ ಅವರ ಮಗ ಹೇಮಂತ್ ಪೂಜೆಯನ್ನು ಮಾಡಿದ್ರು. ಪ್ರತಿ ವರುಷದಂತೆ ಡೈರಿಯಲ್ಲಿ ಕೆಲಸ ಮಾಡುವವರಿಗೆ ಹೊಸ ಬಟ್ಟೆಗಳನ್ನು ಕೊಡಿಸಿ ನಂತರ ಅವರಿಗೆ ಪ್ರತಿ ವರುಷದಂತೆ ಸ್ಟೀಟ ಬಾಕ್ಸ್ ನ ಗಿಪ್ಟ್ ನ್ನು ನೀಡಿದರು.
ನಂತರ ಇಬ್ಬರು ಸಹೋದರಿಯರೊಂದಿಗೆ ಹೇಮಂತ್ ಡೈರಿ ಪೂಜೆಯನ್ನು ಮಾಡಿದ್ರು. ಕಾರು ಬೈಕ್ ಡೈರಿ ಹೀಗೆ ಎಲ್ಲವನ್ನೂ ಪೂಜೆಯನ್ನು ಮಾಡಿ ಶೀಘ್ರವೇ ನಮ್ಮ ತಂದೆ ಆರೋಪ ಮುಕ್ತರಾಗಿ ಹೊರಗೆ ಬರಲಿ ಹಾಗೇ ನಮಗೂ ನಮ್ಮ ಕುಟುಂಬಕ್ಕೂ ಒಳ್ಳೇಯದಾಗಲಿ ಎಂದು ಹೇಮಂತ್ ದೇವರಲ್ಲಿ ಬೇಡಿಕೊಂಡರು. ಅತ್ತ ತಂದೆ ನ್ಯಾಯಾಂಗ ಬಂಧನದಲ್ಲಿದ್ದರೂ ಇತ್ತ ವಿನಯ ಕುಲಕರ್ಣಿ ಮಕ್ಕಳು ತಂದೆಯ ಹಾಗೇ ಡೈರಿಯಲ್ಲಿ ಲಕ್ಷ್ಮೀ ಪೂಜೆಯನ್ನು ಮಾಡಿ ದೇವರ ಪ್ರೀತಿಗೆ ಪಾತ್ರರಾದರು.
ಇನ್ನೂ ನಾಯಕನಿಲ್ಲದ ಕಾಂಗ್ರೇಸ್ ಪಕ್ಷದಲ್ಲಿ ಮಾತುಗಳು ಬರಲಾರದ ಸ್ಥಿತಿ. ಇನ್ನೂ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಬೇಸರಗೊಂಡಿದ್ದು ಡೈರಿಯತ್ತ ಕುಟುಂಬದವರನ್ನು ಕೆಲಸ ಮಾಡುವವರನ್ನು ಬಿಟ್ಟರೇ ಯಾರು ಕಂಡು ಬರಲಿಲ್ಲ ಯಾರ ಸುಳಿವಿಲ್ಲ. ಒಟ್ಟಾರೆ ಮನೆಯ ಯಜಮಾನ ನ್ಯಾಯಾಂಗ ಬಂಧನದಲ್ಲಿದ್ದರೇ ಇತ್ತ ಕುಟುಂಬದವರು ಹಬ್ಬದ ಆಚರಣೆಯನ್ನು ಬಿಡದೇ ಸರಳವಾಗಿ ಮಾಡಿದ್ದು ಕಂಡು ಬಂದಿತು.