ಪಾಟ್ನಾ –
ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟದ ಬಗ್ಗೆ ದೂರುವವರೇ ಹೆಚ್ಚು.ಇದಕ್ಕೆ ಪುಷ್ಠಿ ನೀಡುವಂತ ಘಟನೆ ಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ.ಈಗಲೂ ಅಂತಹದ್ದೇ ಸರ್ಕಾರಿ ಶಾಲೆಯ ವಿಡಿಯೋವೊಂದು ವೈರಲ್ ಆಗಿದೆ ಹೌದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ಒಂದೇ ತರಗತಿ ಯಲ್ಲಿ ಒಂದೇ ಕಪ್ಪ ಹಲಗೆ ಮೇಲೆ ಇಬ್ಬರು ಶಿಕ್ಷಕರು ಮಕ್ಕಳಿಗೆ ಪಾಠ ಹೇಳುವುದದನ್ನು ನೋಡಬಹುದಾಗಿದೆ. ಇಷ್ಟು ಸಾಲದು ಎಂಬಂತೆ 3ನೇ ಶಿಕ್ಷಕಿ ಮಕ್ಕಳನ್ನು ನಿಯಂ ತ್ರಿಸುತ್ತಿರುವ ದೃಶ್ಯ ವನ್ನು ಕಾಣಬಹುದಾಗಿದೆ ಶಿಕ್ಷಕಿಯೊ ಬ್ಬರು ಹಿಂದಿ ಕಲಿಸುತ್ತಿದ್ದರೆ ಪಕ್ಕದಲ್ಲೇ ಶಿಕ್ಷಕ ಉರ್ದು ಪಾಠ ವನ್ನು ಮಾಡುತ್ತಿದ್ದಾರೆ.ಮಕ್ಕಳು ಯಾರನ್ನು ಕೇಳ ಬೇಕು ಯಾರನ್ನು ನೋಡಬೇಕು,ಯಾರನ್ನು ಅನುಸರಿಸಬೇಕು ಎಂಬ ಗೊಂದಲದಲ್ಲಿ ಚೀರುವುತ್ತಿರುವುದನ್ನು ವಿಡಿಯೋ ದಲ್ಲಿ ನೋಡಬಹುದಾಗಿದೆ ಇದು ಬಿಹಾರದ ಸರ್ಕಾರಿ ಶಾಲೆಯೊಂದರ ಚಿತ್ರಣವಾಗಿದೆ

ಆದರ್ಶ ಮಾಧ್ಯಮಿಕ ಶಾಲೆಯ ಶಿಕ್ಷಕಿ ಕುಮಾರಿ ಪ್ರಿಯಾಂಕಾ ಅವರು ಶಾಲಾ ಶಿಕ್ಷಣ ಇಲಾಖೆಯು ಉರ್ದು ಪ್ರಾಥಮಿಕ ಶಾಲೆಯನ್ನು ತಮ್ಮ ಸಂಸ್ಥೆಗೆ ಸ್ಥಳಾಂತರಿಸಿದೆ. ನಮ್ಮ ಶಾಲೆಯಲ್ಲಿ ಸಾಕಷ್ಟು ತರಗತಿ ಕೊಠಡಿಗಳಿಲ್ಲ ಅದ ಕ್ಕಾಗಿಯೇ ನಾವು ಒಂದೇ ಕೋಣೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಸುತ್ತೇವೆ ಎಂದು ಆದರ್ಶ ಮಿಡಲ್ ಸ್ಕೂಲ್‌ನ ಶಿಕ್ಷಕ ಹೇಳಿದ್ದಾರೆ.ಶಾಲೆಯ ಅವ್ಯವಸ್ಥೆ ಕುರಿತು ಜಿಲ್ಲಾ ಶಿಕ್ಷಣಾ ಧಿಕಾರಿ ಕಾಮೇಶ್ವರ ಗುಪ್ತಾ ಅವರನ್ನು ಪ್ರಶ್ನಿಸಿದಾಗ ಆದರ್ಶ ಮಾಧ್ಯಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆ ಎಂದು ಉರ್ದು ಪ್ರಾಥಮಿಕ ಶಾಲೆಗೆ ಒಂದು ಕೊಠಡಿ ನೀಡಿರುವುದು ಒಳ್ಳೆಯದಲ್ಲ.ವಿವಿಧ ವರ್ಗಗಳ ಮಕ್ಕಳಿಗೆ ಒಂದೇ ಕೊಠಡಿಯಲ್ಲಿ ಒಂದೇ ಕಪ್ಪು ಹಲಗೆ ಯಲ್ಲಿ ಕಲಿಸಲಾಗುತ್ತಿದೆ ಎಂದಿದ್ದಾರೆ.