ಹುಬ್ಬಳ್ಳಿ –
ಜನ್ಮ ದಿನದ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಂಡ ಸಮಾಜ ಸೇವಕ…..
ಸಾಮಾನ್ಯವಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಹುಟ್ಟು ಹಬ್ಬವನ್ನು ಹಾಗೇ ಹೀಗೆ ಆಚರಣೆ ಮಾಡಿ ಕೊಳ್ಳುತ್ತಾರೆ ಇದು ಸರ್ವ ಸಾಮಾನ್ಯ.ಅದ್ದೂರಿ ಯಾಗಿ ಕೇಕ್ ಕತ್ತರಿಸಿ ಇಲ್ಲವೇ ಪಾರ್ಟಿ ಮಾಡತಾರೆ ಆದರೆ ಇಲ್ಲೊಬ್ಬ ಉಧ್ಯಮಿ ತಮ್ಮ ಹುಟ್ಟು ಹಬ್ಬ ವನ್ನು ವಿಶೇಷವಾಗಿ ಆಚರಣೆ ಮಾಡಿಕೊಂಡಿದ್ದಾರೆ
ಹೌದು ಇದಕ್ಕೆ ಸಾಕ್ಷಿ ಹುಬ್ಬಳ್ಳಿಯ ಸರ್ವಧರ್ಮ ಸಮಾಜ ಸೇವಕ ರಮೇಶ ಮಹಾದೇವಪ್ಪನವರ ತಮ್ಮ ಹುಟ್ಟು ಹುಬ್ಬದ ಅಂಗವಾಗಿ, ನಗರದ ಪ್ರೇಮ ಬಿಂದು ರಕ್ತ ನಿಧಿ ಕೇಂದ್ರದಲ್ಲಿ ಬೆಂಗೇರಿಯ ಬ್ಲಡ್ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ವಿಶೇಷವಾಗಿ ಜನ್ಮ ದಿನ ಆಚರಣೆ ಮಾಡಿಕೊಂಡಿದ್ದಾರೆ.
ಹೌದು…..ಕೊರೊನಾ ಅಟ್ಟಹಾಸ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ಬಹಳಷ್ಟು ಜನರು ಮುಂದೆ ಬರದ ಕಾರಣ ಇವರ ಆಪ್ತ ಸಹಾಯಕರಾದ ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ಉಪಾಧ್ಯ ಕ್ಷರಾದ ಕಲಂದರ ಮುಲ್ಲಾ ಇವರ ನೇತ್ರತ್ವದಲ್ಲಿ ಈ ಒಂದು ಕಾರ್ಯ ನಡೆಯಿತು
ಖಾಸಿಮ್ ಕುಡಲಗಿ, ಹಾಗೂ ಅವರ ಗೆಳೆಯರ ಬಳಗದ ವತಿಯಿಂದ ಸುಮಾರು 50 ಕ್ಕೂ ಹೆಚ್ಚು ಯುವಕರು ರಕ್ತ ದಾನ ಮಾಡುವ ಮೂಲಕ ರಕ್ತದ ಕೊರತೆ ನೀಗಿಸುವ ಕೆಲಸ ಮಾಡಿದರು.
ಎಲ್ಲರೂ ಸಹ ರಕ್ತದಾನ ಮಾಡಿ ಅದೆಷ್ಟೋ ಜೀವ ವನ್ನು ಉಳಿಸಬಹುದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಒಟ್ಟಾರೆ ದೊಡ್ಡ ವ್ಯಕ್ತಿ ವ್ಯಕ್ತಿತ್ವ ಹೊಂದಿದ್ದರು ಸಂದಿಗ್ಧ ಪರಿಸ್ಥಿತಿಯಲ್ಲಿ ವಿಭಿನ್ನವಾಗಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡು ಕಲಂದರ ಮುಲ್ಲಾ ನೇತ್ರತ್ವದಲ್ಲಿ ರಮೇಶ್ ಮಹಾದೇವ ಪ್ಪನವರ ಕಾರ್ಯ ಮೆಚ್ಚುವಂತದ್ದು