ಧಾರವಾಡ –
ನಿವೃತ್ತಿ ನಂತರ ಊರಿಗೆ ಮರಳಿದ ಯೋಧನಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ಮಾಡಲಾಯಿತು. ಹೌದು ಧಾರವಾಡ ಜಿಲ್ಲೆಯ ರಾಮಾಪೂರ ಗ್ರಾಮದಲ್ಲಿ ದೇಶ ಸೇವೆ ಮಾಡಿ ಊರಿಗೆ ಬಂದ ಯೋಧನನ್ನು ಸ್ವಾಗತ ಮಾಡಲಾಯಿತು.

ಧಾರವಾಡ ತಾಲ್ಲೂಕಿನ ರಾಮಾಪೂರ ಗ್ರಾಮದಲ್ಲಿ ಈ ಒಂದು ವಿಶೇಷ ಘಟನೆ ನಡೆದಿದೆ. ಗ್ರಾಮಸ್ಥರಿಂದ ಸೇನೆಯಲ್ಲಿ ಭಾರತೀಯ ಸೈನ್ಯ ದಲ್ಲಿ 17 ವರುಷ ಸೇವೆ ಸಲ್ಲಿಸಿ ಈಗ ಮರಳಿ ಗ್ರಾಮಕ್ಕೆ ಶಿವಲಿಂಗಪ್ಪ ಮಲ್ಲಪ್ಪ ಗುಡಕಟ್ಟಿ ಬಂದಿದ್ದಾರೆ.

ದೇಶ ಸೇವೆಯ ಕೆಲಸ ನಿರ್ವಹಿಸಿದ ಊರಿಗೆ ಶಿವಲಿಂಗಪ್ಪ ಗುಡಕಟ್ಟಿ ಅವರಿಗೆ ಗ್ರಾಮಸ್ಥರು ಅದರಲ್ಲೂ ವಿಶೇಷವಾಗಿ ಬಾಲ್ಯ ಸ್ನೇಹಿತರು ಗ್ರಾಮದಲ್ಲಿ ಅದ್ಧೂರಿ ಸ್ವಾಗತ ಮಾಡಿಕೊಂಡು ಗ್ರಾಮಕ್ಕೆ ಬರಮಾಡಿಕೊಂಡರು.

ಸುಮಾರು 17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಶಿವಲಿಂಗಪ್ಪ ಅವರು ಜಮ್ಮು-ಕಾಶ್ಮೀರ, ತಮಿಳುನಾಡು ,ಅಸ್ಸಾಂ, ಸಿಕ್ಕಿಂ, ದೆಹಲಿ, ಪಂಜಾಬ್,ನಾಗಲ್ಯಾಂಡ್,ಗುಜರಾತ್ ಸೇರಿದಂತೆ ಹಲವೆಡೆ ಕರ್ತವ್ಯ ನಿರ್ವಹಿಸಿದ್ದಾರೆ. ಹೀಗಾಗಿ, ಊರಿಗೆ ಮರಳಿ ಬಂದ ವೀರ ಯೋಧನನ್ನು ಗ್ರಾಮಸ್ಥರು ಮೆರವಣಿಗೆ ಮಾಡಿಸಿ, ಬಳಿಕ ಗೌರವ ನೀಡಿ ಸನ್ಮಾನಿಸಿದರು.

ಮೊದಲಿಗೆ ಗ್ರಾಮಕ್ಕೆ ಯೋಧನನ್ನು ಹೂಮಾಲೆ ಹಾಕಿ ಬರಮಾಡಿಕೊಂಡರು ಇದೇ ವೇಳೆ ಮಹಿಳೆಯರು ಆರತಿ ಬೆಳಗಿ ಬರಮಾಡಿಕೊಂಡರು.

ಇದೇ ವೇಳೆ ವೇದಿಕೆಯ ಮೇಲೆ ನಿವೃತ್ತ ಯಾದ ಅಕ್ಕ ಪಕ್ಕದ ಊರಿನ ಇನ್ನಿಬ್ಬರು ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಒಂದು ಅದ್ದೂರಿ ವಿಶೇಷ ಕಾರ್ಯಕ್ರಮದಲ್ಲಿ ಗ್ರಾಮದ ಗುರು ಹಿರಿಯರು ಅದರಲ್ಲೂ ವಿಶೇಷವಾಗಿ ಬಾಲ್ಯದ ಗೆಳೆಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದಕ್ಕಾಗಿ ವಿಶೇಷವಾಗಿ ತೆರದ ಜೀಪವೊಂದನ್ನು ಅದ್ದೂರಿಯಾಗಿ ಅಲಂಕಾರ ಮಾಡಲಾಗಿತ್ತು ಅದರಲ್ಲಿ ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಲಾಯಿತು.