ಹೋರಾಟಗಾರರ ಡಿಸಿಪಿಯವರ ನಡುವೆ ಮಾತಿನ ಚಕಮಕಿ

Suddi Sante Desk

ಹುಬ್ಬಳ್ಳಿ –

ಭಾರತ್ ಬಂದ್ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ರೈತ ಹೊರಾಟಗಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಅಪರಾಧ ವಿಭಾಗದ ಡಿಸಿಪಿ ಬಸರಗಿ ಯವರ ಮತ್ತು ಹೋರಾಟಗಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಹುಬ್ಬಳ್ಳಿಯ ಹೊಸೂರು ಡಿಪೋ ಬಳಿ ವಾಗ್ವಾದ ಕಂಡು ಬಂದಿತು. ಬಸ್ ತಡೆದ ರೈತ ಹೊರಾಟಗಾರರಿಗೆ ಬಸರಗಿಯವರು ಕ್ಲಾಸ್ ತೆಗೆದುಕೊಂಡರು.

ಹೋರಾಟಗಾರರಿಗೆ ಡಿಸಿಪಿ ಬಸರಗಿ‌ ಪ್ರತಿಭಟನೆ ಕೈ ಬಿಡದಿದ್ದರೇ ಬಂಧನ ಮಾಡೋದಾಗಿ ಎಚ್ಚರಿಕೆ ನೀಡಿದರು. ಇವರ ಮಾತಿನಿಂದ ಅಸಮಧಾನಗೊಂಡ ಹೋರಾಟಗಾರರು ನಾವೇನು ಕೊಲೆ ಮಾಡಿದ್ದೇವಾ ಸುಲಿಗೆ ಮಾಡಿದ್ದೇವಾ ಶಾಂತಯುತವಾಗಿ ಹೋರಾಟವನ್ನು ಮಾಡ್ತಾ ಇದ್ದೇವಿ ನಮಗೆ ಸಹಕಾರ ಕೊಡಿ ಎಂದು ಮನವಿ ಮಾಡಿಕೊಂಡರು. ಬಲವಂತದ ಬಂದ್ ಮಾಡದಂತೆ ಡಿಸಿಪಿ ಎಚ್ಚರಿಕೆ ನೀಡಿದರು ಇದರಿಂದ ಮತ್ತಷ್ಟು ಕೋಪಗೊಂಡ ಹೋರಾಟಗಾರರ ಮತ್ತು ಡಿಸಿಪಿ ಯವರ ನಡುವೆ ವಾಗ್ವಾದ ನಡೆಯಿತು, ಮಾತಿನ ಚಕಮಕಿ ನಡೆಯಿತು. ಇದೇ ವೇಳೆ ಬಸ್ ತಡೆದು ಪ್ರತಿಭಟನೆ ಮಾಡುತ್ತಿದ್ದ ಹೋರಾಟಗರಾರನ್ನು ಹಿಂದೆ ಸರಿಸಿ ಬಸ್ ನ್ನು ಡಿಪೋ ಗೆ ಕಳಿಸಿದ್ರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.