ಹೆಬ್ಬಳ್ಳಿ –
ಹೆಬ್ಬಳ್ಳಿ, ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಅಡುಗೆ ಸಹಾಯಕಿ ಶ್ರೀಮತಿ ಶಶಿಕಲಾ ಸುರೇಶ ದಾಸರ ಇವರು ವಿದ್ಯುತ್ ಅವಘಡದಿಂದ ಅತೀ ಚಿಕ್ಕ ವಯಸ್ಸಿನಲ್ಲಿ ನಿಧನರಾಗಿದ್ದು ಬಡಕುಟುಂಬ ಚಿಕ್ಕ ಚಿಕ್ಕ ಮಕ್ಕಳು
ಹತ್ತು ವರ್ಷಗಳ ಕಾಲ ನಮ್ಮ ಸರ್ಕಾರಿ ಶಾಲೆಯ ಮಕ್ಕಳಿಗೆ ಊಟ ನೀಡಿ ಸೇವೆ ಮಾಡಿದ ಇವರಿಗೆ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಈ ಕುಟುಂಬಕ್ಕೆ ನಮ್ಮ ಕಡೆಯಿಂದ ಏನಾದರೂ ಸಹಾಯ ಮಾಡೋಣ ಅಂತ ಗ್ರಾಮದ ಶಿಕ್ಷಕ ಎಲ್ ಐ ಲಕ್ಕಮ್ಮನವರ ಆ ಶಾಲೆಯ ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷರಾದ ಸುರೇಶ ಅಂಬಿಗೇರ ಅವರಿಗೆ ಕೇಳಿಕೊಂಡರು ತಕ್ಷಣ ಸ್ಪಂದಿಸಿದ ಅದ್ಯಕ್ಷರು ಶಾಲೆಯ ಮುಖ್ಯ ಶಿಕ್ಷಕ ರಮೇಶ ಕಾಂಬಳೆ ಅವರ ನೇತ್ರತ್ವದಲ್ಲಿ ಶಾಲೆಯ ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ಧನಸಹಾಯ ಮಾಡುವುದರ ಮೂಲಕ ಮಾನವೀಯತೆಯನ್ನು ಮೆರೆದರು
ಇವರ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಸಹ ರಾಜ್ಯ ಘಟಕದಿಂದ ಮತ್ತು ದಾನಿಗಳ ಸಹಾಯದಿಂದ ಆ ಕುಟುಂಬಕ್ಕೆ ನೆರವು ನೀಡುವ ಭರವಸೆಯನ್ನು ನೀಡಿ ಆಸರೆಯಾಗಲು ಮುಂದಾಗಿದ್ದಾರೆ.