ಬೆಂಗಳೂರು –
ಹೌದು ಸರಕಾರಿ ಇಲಾಖೆಗಳಲ್ಲಿ ನೌಕರರ ವರ್ಗಾವಣೆಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ ಮುಖ್ಯಮಂತ್ರಿ ಸಧ್ಯ ಈ ಕುರಿತು ಆದೇಶ ಮಾಡಿರುವ ಅವರು ಮುಂದಿನ ಆದೇಶದ ವರೆಗೆ ರಾಜ್ಯದ ವಿವಿಧ ಇಲಾಖೆಗಳಲ್ಲಿ ವರ್ಗಾವಣೆಗಳಿಗೆ ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಮುಂದಿನ ಸೂಚನೆಯವರೆಗೆ ಮುಖ್ಯಮಂತ್ರಿಯ ವರ ಸಚಿವಾಲಯಕ್ಕೆ ವರ್ಗಾವಣೆ ಪ್ರಸ್ತಾವನೆ ಮಂಡಿಸದಂತೆ ಸೂಚನೆ ನೀಡಲಾಗಿದೆ.ಅರಣ್ಯ ಮತ್ತು ಪರಿಸರ ಇಲಾಖೆ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಇದುವರೆಗೆ ಈ ಸೂಚನೆ ಗಳು ಹಂತ ಹಂತವಾಗಿ ಹೋಗಿದ್ದು ಮುಂದೆ ಬೇರೆ ಇಲಾಖೆಗಳಿಗೂ ಸೂಚನೆ ನೀಡುವ ಸಾಧ್ಯತೆ ಕಂಡು ಬರುತ್ತಿವೆ.
ಈಗಾಗಲೇ ಮುಖ್ಯಮಂತ್ರಿಗಳು ಈ ಕುರಿತು ಆದೇಶ ಹೊರಡಿಸಿದ್ದಾರೆ.ಆಯಾ ಇಲಾಖೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸಿಎಂ ಸೂಚನೆ ನೀಡಿದ್ದಾರೆ. ಸಾರ್ವತ್ರಿಕ ವರ್ಗಾವಣೆ ಸಂದರ್ಭದಲ್ಲಿ ಇಲಾಖಾವಾರು ವರ್ಗಾವಣೆಗೆ ಅವಕಾಶವಿರುತ್ತದೆ.ಅದನ್ನು ಹೊರತುಪಡಿಸಿದ ಸಂದರ್ಭದಲ್ಲಿ ವರ್ಗಾವಣೆ ಮಾಡಬೇಕಾದರೆ ಸಿಎಂ ಅವರ ಸಹಿ ಆಗಲೇಬೇಕು.ಹಾಗಾಗಿ ನೂರಾರು ಕಡತಗಳು ಮುಖ್ಯಮಂತ್ರಿ ಬಳಿಗೆ ಬರುತ್ತವೆ. ಹೀಗಾಗಿ ಈಗ ಅದಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ್ದು ಮುಂದೆ ಯಾವಾಗ ಗ್ರೀನ್ ಸಿಗ್ನಲ್ ನೀಡತಾರೆ ಎಂಬೊಂದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್…..