ಜೇವರ್ಗಿ –
ಹೌದು ಇಂತಹ ದೊಂದು ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿ ನಡೆದಿದೆ. ತಾಲೂಕಿನ ಸೊನ್ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಭಾಶ್ಚಂದ್ರ ಸಹ ಶಿಕ್ಷಕರು ಕಳೆದ ಹಲವು ದಿನಗಳಿಂದ ಶಾಲೆಗೆ ಅನಧಿಕೃತವಾಗಿ ಗೈರಾಗಿದ್ದರು. ಈ ಕುರಿತು ಹಾಜರಾಗಲು ನೋಟೀಸ್ ನ್ನು ನೀಡಲಾಗಿತ್ತು ನಂತರ ಬಿಇಓ ಕಚೇರಿ ಗೆ ಆಗಮಿಸಿ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ಕೇಳಿದ್ದರು. ಅರ್ಜಿಯನ್ನು ಪರಿಶೀಲನೆ ನಡೆಸಿದ ಸಮಯದಲ್ಲಿ ಇವರು ಇನ್ನೂ ಕೋವಿಡ್ ಲಸಿಕೆ ತೆಗೆದುಕೊಳ್ಳುದ ವಿಚಾರ ತಿಳಿದಿದೆ.
ಸಮಗ್ರವಾಗಿ ವಿಚಾರಣೆ ನಡೆಸಿದ ಅಧಿಕಾರಿಗಳು ಈ ಕೂಡಲೇ ಈ ಶಿಕ್ಷಕ ನನ್ನು ಕಡ್ಡಾಯವಾಗಿ ರಜೆಯ ಮೇಲೆ ಕಳಿಸಿ BEO ಆದೇಶವನ್ನು ಮಾಡಿದ್ದಾರೆ.
ಇನ್ನೂ ಇಲಾಖೆ ಸರ್ಕಾರ ಕೂಡಾ ಈ ಒಂದು ಲಸಿಕೆ ಕುರಿತು ಜಾಗೃತಿ ಮಾಹಿತಿ ನೀಡಿದರು ಕೂಡಾ ಇನ್ನೂ ತಗೆದುಕೊಳ್ಳದ ಹಿನ್ನಲೆಯಲ್ಲಿ ರಜೆಯ ಮೇಲೆ ಕಳಿಸಿ ಆದೇಶವನ್ನು ಮಾಡಿದ್ದಾರೆ.