ಹುಬ್ಬಳ್ಳಿ –
ಹುಬ್ಬಳ್ಳಿಯ ಹರಿಜನ ಸರ್ಕಾರಿ ಅನುದಾನಿತ ಶಾಲೆಯ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಹೌದು ಹರಿಜನ ಹೆಣ್ಣುಮಕ್ಕಳ ಕನ್ನಡ ಪ್ರಾಥಮಿಕ ಶಾಲೆ ಎದುರು ವಾಕ್ಸಮರ ಇದರೊಂದಿಗೆ ಶಾಲೆ ಖಾಲಿ ಮಡಿಸಲು ಬಂದ ಸೊಸೈಟಿ ಜನ ಇವೆಲ್ಲ ಚಿತ್ರಣ ಕಂಡು ಬಂದಿತು.
1956 ರಲ್ಲಿ ಆರಂಭವಾದ ಈ ಒಂದು ಶಾಲೆ. ಗಾಂಧಿವಾಡ ಕೋ ಆಪರೇಟಿವ್ ಸೊಸಾಯಿಟಿ ಅವರು ಲ್ಯಾಂಡ್ ಅನ್ನು ಖರೀದಿ ಮಾಡಿದ್ರು.ಬಳಿಕ ಲೇಔಟ್ ಮಾಡಿ ಮಾರಾಟ ಮಾಡಲಾಗಿತ್ತು.
ಜಾಗೆಯನ್ನು ಶಾಲಾ ಕಟ್ಟಡಕ್ಕೆ ನೀಡಿದ್ರು.ಆದ್ರೆ ಸಧ್ಯ ಈ ಒಂದು ಶಾಲೆಯ ಜಾಗ ಬೀಡುವಂತೆ ಪಟ್ಟು ಹಿಡಿದಿದ್ದು ಖಾಲಿ ಮಾಡಿಸಲಾಯಿತು.
ಗಾಂಧಿವಾಡ ಸೊಸೈಟಿ ಖೊಟ್ಟಿ ದಾಖಲೆ ಸೃಷ್ಟಿಸಿ ದಾವೆ ಹೂಡಿದ್ರು.ನ್ಯಾಯಾಲಯ ಖಾಲಿ ಮಾಡುವಂತೆ ಹೇಳಿದೆ ಅಂತ ಹೇಳುತ್ತಿರೊ ಸೊಸೈಟಿ ಕಡೆಯವರು.ಹೀಗಾಗಿ ಈ ಒಂದು ಶಾಲೆಯನ್ನು ಖಾಲಿ ಮಾಡಿಸಲಾಗುತ್ತಿದೆ.
ಆದೇಶದಲ್ಲಿ ಶಾಲಾ ಕಟ್ಟಡ ಖಾಲಿ ಮಾಡುವಂತೆ ನಮೂದಿಲ್ಲ.ಒತ್ತಾಯ ಪೂರ್ವಕವಾಗಿ ಪೊಲೀಸ್ ಫೋರ್ಸ್ ತಂದು ಖಾಲಿ ಮಾಡಿಸಲಾಗುತ್ತಿದೆ ಅಂತ ಗಾಂಧಿವಾಡ ಕೋ ಆಪರೇಟಿವ್ ಸೊಸೈಟಿಯ ವಿರುದ್ದ ಆರೋಪ ಮಾಡಲಾಗಿದೆ.
ಸ್ಥಳೀಯರಿಂದ ಈ ಒಂದು ಆರೋಪ ಕೇಳಿ ಬಂದಿತು.ಸ್ಥಳದಲ್ಲಿ ಎಸಿಪಿ ನೈತೃತ್ವದಲ್ಲಿ ಬಿಗಿ ಪೊಲೀಸ ಬಂದೋಬಸ್ತ್ ಮಾಡಲಾಗಿದೆ. ಇನ್ನೂ ಕಣ್ಣೀರಿಡುತ್ತ ಬಾಯಿ ಬಡಿದುಕೊಳ್ಳುತ್ತಿರುವ ಮಕ್ಕಳು ಆಕ್ರಂದನ ಯಾರಿಗೂ ಕೇಳುತ್ತಿಲ್ಲ ಕಾಣುತ್ತಿಲ್ಲ ಇನ್ನೂ ಶಾಲೆಯ ಸಾಮಾನು ಗಳೆಲ್ಲವನ್ನೂ ರಸ್ತೆಗೆ ಹಾಕಿರುವ ದೃಶ್ಯ ಕಂಡು ಬಂದಿತು.