ಧಾರವಾಡದಲ್ಲಿ ಭೀಕರ ಅಪಘಾತ 7 ಜನರ ಸಾವು ಮರಕ್ಕೆ ಕ್ರೂಜರ್ ಡಿಕ್ಕಿಯಾಗಿ ಘಟನೆ…..

Suddi Sante Desk

ಧಾರವಾಡ –

ಕ್ರೂಜರ್ ವೊಂದು ಮರಕ್ಕೆ ಡಿಕ್ಕಿಯಾಗಿ ಸ್ಥಳದಲ್ಲೇ ಏಳು ಜನರು ಸಾವಿಗೀಡಾದ ಘಟನೆ ಧಾರವಾಡದ ಬಾಡ ಗ್ರಾಮದಲ್ಲಿ ನಡೆದಿದೆ.ಇನ್ನೂ ಆರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಚಿಕಿತ್ಸೆ ಗಾಗಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ

ಸಧ್ಯ ಏಳು ಜನರು ಸಾವಿಗೀಡಾಗಿದ್ದು ಇನ್ನೂ ಆರೇಳು ಜನರು ತೀವ್ರವಾಗಿ ಗಾಯಗೊಂಡಿದ್ದು ಇನ್ನೂ ಸುದ್ದಿ ತಿಳಿದ ಧಾರವಾಡ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತರ ಕುರಿತು ಮಾಹಿತಿ ಯನ್ನು ಪಡೆದುಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

ನಿಶ್ಚಿತಾರ್ಥ ಮುಗಿಸಿ ವಾಪಸ್ ಆಗುತ್ತಿದ್ದ 7 ಜನರು ಸಾವಿಗೀಡಾಗಿದ್ದಾರೆ.ರೇವಣಸಿದ್ದೇಶ್ವರ ಮಠದಿಂದ ನಿಗದಿ ಗ್ರಾಮಕ್ಕೆ ವಾಪಸ್ ಆಗುತ್ತಿದ್ದ ಜನರು.20 ಕ್ಕೂ ಹೆಚ್ಚು ಜನರನ್ನು ಹೊತ್ತು ಸಾಗುತ್ತಿದ್ದ ಟೆಂಪೋ ಟ್ರ್ಯಾಕ್ಸ್.ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಕ್ರೂಜರ್.

ಸ್ಥಳದಲ್ಲೇ 7 ಜನರ ದುರ್ಮರಣವಾಗಿದ್ದು ಅಪಘಾತ ವಾಗುತ್ತಿದ್ದಂತನೇ ಸ್ಥಳ ದಿಂದ ಚಾಲಕ ಪರಾರಿಯಾಗಿ ದ್ದಾನೆ.ಗಾಯಗಳು ಗಳನ್ನು ಧಾರವಾಡ ಜಿಲ್ಲಾ ಆಸ್ಪತ್ರೆ ಹಾಗೂ ಕಿಮ್ಸ್ ಗೆ ರವಾನೆ ಮಾಡಲಾಗಿದೆ.

ವರದಿ ಜಿಲಾನಿ ಖಾಜಿ ಸುದ್ದಿ ಸಂತೆ ಟೀಮ್

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.