ಧಾರವಾಡ –
ಬೈಕ್ ವೊಂದು ಅಪಘಾತವಾಗಿ ಇಬ್ಬರು ಸಾವಿಗೀಡಾದ ಘಟನೆ ಧಾರವಾಡದ ಉಪನಗರ ಪೊಲೀಸ್ ಠಾಣೆ ಮುಂದೆ ನಡೆದಿದೆ. ಬೈಕ್ ನಲ್ಲಿ ಹೊರಟಿದ್ದ ಇಬ್ಬರು ಸಾವಿಗೀಡಾಗಿದ್ದು ಮೃತರು ಸೈದಾಪೂರದ ನಿವಾಸಿಗಳಾ ಗಿದ್ದು ಬೈಕ್ ಅಪಘಾತವಾಗಿದ್ದು ಇನ್ನೂ ಸುದ್ದಿ ತಿಳಿದ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿದ ಪರಿಶೀಲನೆ ಮಾಡುತ್ತಿದ್ದಾರೆ.

ಬೈಕ್ ಹೇಗೆ ಅಪಘಾತವಾಯಿತು ಎಂಬ ಕುರಿತಂತೆ ಪರಿಶೀಲನೆ ಮಾಡುತ್ತಿದ್ದು ಹಾಗೇ ಮೃತರ ಕುರಿತಂತೆ ಮಾಹಿತಿಯನ್ನು ಸಂಚಾರಿ ಪೊಲೀಸರು ಕಲೆಹಾಕುತ್ತಿದ್ದು ಒರ್ವ ಸ್ಥಳದಲ್ಲೇ ಸಾವಿಗೀಡಾದರ ಇನ್ನೂ ಇನ್ನೊರ್ವ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯದಲ್ಲಿಯೇ ಮೃತರಾಗಿದ್ದು ಸಂಚಾರಿ ಪೊಲೀಸರು ಪರಿಶೀಲನೆ ಮಾಡ್ತಾ ಇದ್ದಾರೆ.


ಮತೀನ್ ಅಚ್ಚಮ್ಮನವರ ಮತ್ತು ಪರಹನ್ ಎಂಬ ಯುವಕರೇ ಮೃತರಾದವರಾಗಿದ್ದು ಇಬ್ಬರು ಸೈದಾಪೂರದ ನಿವಾಸಿಗಳಾಗಿದ್ದಾರೆ


