ಹುಬ್ಬಳ್ಳಿ –
ಧಾರವಾಡದಲ್ಲಿನ ಭೀಕರ ಅಪಘಾತ ಮಾಸುವ ಮುನ್ನವೇ ಹುಬ್ಬಳ್ಳಿಯ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.ಹೌದು ಖಾಸಗಿ ಬಸ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಸ್ಥಳದಲ್ಲೇ ಒಂಬತ್ತು ಜನರು ಮೃತರಾಗಿದ್ದಾರೆ
ಸ್ಥಳದಲ್ಲಿಯೇ ಆರು ಜನರ ಸಾವಿಗೀಡಾಗಿದ್ದರೆ ಇನ್ನೂ 26 ಜನರಿಗೆ ಗಾಯಗಳಾಗಿದ್ದು ಇತ್ತ ಚಿಕಿತ್ಸೆ ಫಲಿಸದೇ ಮೂರು ಜನರು ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.ಇದರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.ಹುಬ್ಬಳ್ಳಿ ಹೊರವಲಯದ ತಾರಿಹಾಳ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ 4ರಲ್ಲಿ ಈ ಒಂದು ಘಟನೆ ನಡೆದಿದೆ.ಮಹಾರಾಷ್ಟ್ರ ದ ಕೊಲ್ಹಾಪುರ ದಿಂದ ಬೆಂಗಳೂರಿಗೆ ಹೊರಟಿದ್ದ ಬಸ್ ಇನ್ನೂ ಧಾರವಾಡ ಕಡೆಗೆ ಹೊರಟಿದ್ದ ಲಾರಿ ನಡುವೆ ಅಪಘಾತ ಸಂಭವಿಸಿದೆ.
ಮೃತರೆಲ್ಲರೂ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಸೇರಿದವ ರಾಗಿದ್ದಾರೆ.ಗಾಯಾಳುಗಳು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕಿತ್ಸೆ ಫಲಕಾರಿಯಾಗದೆ ಮತ್ತೊಂದು ಸಾವಿಗೀಡಾದ್ದಾರೆ ಹೀಗಾಗಿ ಸಾವಿನ ಸಂಖ್ಯೆ ಒಂಬತ್ತಾಗಿದ್ದು ಬಾಬೂಸಾಬ್ ಚಿಕಿತ್ಸೆ ಫಲಸದೇ ಮೃತರಾಗಿದ್ದಾರೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಿವಾಸಿಯಾಗಿದ್ದಾರೆ.