ಧಾರವಾಡ –
ಡಬಲ್ ಟ್ರೇಲರ್‌ನಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಒಂದು ಟೇಲರ್ ಕಬ್ಬಿನ ಸಮೇತ ನೆಲಕ್ಕುರುಳಿದ ಘಟನೆ ಧಾರವಾಡ ಮೇದಾರ ಓಣಿಯಲ್ಲಿ ನಡೆದಿದೆ.

ಸವದತ್ತಿಯತ್ತ ಟ್ರ್ಯಾಕ್ಟರ್‌ನಲ್ಲಿ ಕಬ್ಬುನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಮೇದಾರ ಓಣಿಯಲ್ಲಿ ಟ್ರ್ಯಾಕ್ಟರ್ ಏಕಾಏಕಿ ನಿಯಂತ್ರಣ ತಪ್ಪಿದ್ದು ಈ ವೇಳೆ ಎರಡು ಟೇಲರ್ ಪೈಕಿ ಒಂದು ಕೊಂಡಿ ಕಟ್ ಆಗಿ ನೆಲಕ್ಕುರಳಿದೆ.

ಅದೃಷ್ಟವಶಾತ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ರಸ್ತೆ ಮಧ್ಯೆಯೇ ಟ್ರ್ಯಾಕ್ಟರ್ ಟೇಲರ್ ಬಿದ್ದ ಕಾರಣ ಕೆಲಹೊತ್ತು ರಸ್ತೆ ಸಂಚಾರ ಬಂದ್ ಆಗಿತ್ತು.
