ಹುಬ್ಬಳ್ಳಿ –
ಸ್ಕೂಟಿ ಮೇಲೆ ಹೋಗುತ್ತಿದ್ದ ಮಹಿಳೆಯೊಬ್ಬರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಪರಿಣಾಮವಾಗಿ ಹಿಂಬಾಗದಲ್ಲಿದ್ದ ಟ್ರಾಕ್ಟರ್ ಮಹಿಳೆಯ ತಲೆಯ ಮೇಲೆ ಹರಿದು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯ ಬಿ ಆರ್ ಪಾಟೀಲ್ ಆಸ್ಪತ್ರೆಯ ಮುಂಬಾಗದಲ್ಲಿ ನಡೆದಿದೆ
ನೂರಾಣಿ ಪ್ಲಾಟ್ ನಿವಾಸಿ ನಜಗುಣ ಎಂಬ 40 ವಯಸ್ಸಿನ ಮಹಿಳೆ ತಲೆಯ ಮೇಲೆ ಟ್ರಾಕ್ಟರ್ ಹರಿದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾಳೆ. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಭೇಟಿ ನೀಡಿದ ಉತ್ತರ ಸಂಚಾರಿ ಪೊಲೀಸರು ಶವವನ್ನು ಮರ ಣೋತ್ತರ ಪರೀಕ್ಷೆಗೆ ಕೀಮ್ಸ್ ಶವಾಗಾರಕ್ಕೆ ರವಾನಿಸಿ ದ್ದಾರೆ. ಸಧ್ಯ ಟ್ರಾಕ್ಟರ್ ಉತ್ತರ ಸಂಚಾರಿ ಪೊಲೀಸರ ವಶದಲ್ಲಿದ್ದು ಮುಂದಿನ ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ